ದಿನದ ಸುದ್ದಿ
ಜಾರಕಿಹೊಳಿ ಸಿಡಿ ಪ್ರಕರಣ | ನನ್ನ ಮನೆಗೆ ಭೇಟಿ ನೀಡಿ ಸಿಡಿ ಕೊಟ್ಟಿದ್ದರು : ದಿನೇಶ್ ಕಲ್ಲಹಳ್ಳಿ
ಸುದ್ದಿದಿನ,ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣವು ದಿನಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ದೂರು ಕೊಟ್ಟಾಗ ತುಂಬಾ ಧೈರ್ಯದಿಂದಲೇ ಇದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಈಗ ನರ್ವಸ್ ಆಗಿದ್ದಾರೆ.
ಕನಕಪುರದ ದಿನೇಶ್ ಕಲ್ಲಹಳ್ಳಿ ಅವರು ಅಶ್ಲೀಲ ಸಿಡಿ ಕೇಸ್‍ನಲ್ಲಿ ನಾನು ನಿರಪರಾಧಿ ಎಂದು ವಿಶೇಷ ತನಿಖಾ ತಂಡಕ್ಕೆ ಹೇಳಿಕೆಯನ್ನು ನೀಡಿದ್ದಾರೆ. ನಾನು ಆ ಸಂದರ್ಭ ಒತ್ತಾಯಕ್ಕೆ ಒಳಗಾಗಿದ್ದು, ಒತ್ತಾಯದಿಂದ ದೂರು ಕೊಟ್ಟಿದ್ದೆ. ದೂರು ಕೊಡಲೇಬೇಕು ಅಂತ ಒತ್ತಾಯವನ್ನು ಯಾರೂ ಮಾಡಲಿಲ್ಲ. ಹುಡುಗಿಗೆ ನ್ಯಾಯ ಕೊಡಿಸಬೇಕು ಅಂತ ಒತ್ತಾಯ ಮಾಡಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ | ಹಿಂದುಳಿದ,ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಬಿಜೆಪಿಯಿಂದ ಅನ್ಯಾಯ ; ಹೋರಾಟ ನಡೆಸದೆ ನ್ಯಾಯಸಿಗದು : ಸಿದ್ದರಾಮಯ್ಯ
3 ದಿನಗಳ ಕಾಲ ನಿರಂತರವಾಗಿ ಕರೆ ಮಾಡಿದ್ದರಿಂದ ನಾನು ದೂರು ಕೊಡಲು ಮುಂದಾದೆ. ನನ್ನ ಮನೆಗೆ ಭೇಟಿ ನೀಡಿ ಸಿಡಿ ಕೊಟ್ಟಿದ್ದರು ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಮುಂದೆ 3 ಪುಟಗಳ ಹೇಳಿಕೆ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243