ರಾಜಕೀಯ
ಸಿದ್ದರಾಮಯ್ಯ ಈಗಲೂ ನನ್ನ ಮುಖ್ಯಮಂತ್ರಿ ; ಕರ್ನಾಟಕದ ಬೊಬ್ಬುಲಿ ಪುಲಿ : ರಮೇಶ್ ಕುಮಾರ್
ಸುದ್ದಿದಿನ, ಕೋಲಾರ : ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳಾದರೂ ಅವರೇ ನನಗೆ ನಾಯಕ,ಅವರೇ ನನ್ನ ಮುಖ್ಯ ಮಂತ್ರಿಗಳು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸ ಕನಕ ಭವನದ ಉದ್ಘಾಟನೆ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕರ್ನಾಟಕದ ಬೊಬ್ಬುಲಿ ಪುಲಿ. ಅವರ ಮಾತು ಒರಟಾದರೂ ಅವರ ಮನಸ್ಸು ಮಾತ್ರ ತುಂಬಾ ಮೃದು. ದೇವರಾಜು ಅರಸು ಅವರಲ್ಲಿದ್ದ ಜಾತ್ಯಾತೀತ ಗುಣಗಳು ಸಿದ್ದರಾಮಯ್ಯ ಅವರಲ್ಲೂ ಇವೆ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಹಿಂದೆ ಸಿದ್ದ ರಾಮಯ್ಯ ಅವರ ಶ್ರಮ ತುಂಬಾ ಇದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401