ದಿನದ ಸುದ್ದಿ

ರಮ್ಯಾ ಟ್ವಿಟರ್​​ ಅಕೌಂಟ್‌‌ ಡಿಲೀಟ್ ; ಕಾಂಗ್ರೆಸ್ ಗೆ ಗುಡ್ ಬೈ..!?

Published

on

ಸುದ್ದಿದಿನ ಡೆಸ್ಕ್ : ಕಾಂಗ್ರೆಸ್​ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರ ಟ್ವಿಟರ್​​ ಅಕೌಂಟ್​​ ಡಿಲೀಟ್​​ ಆಗಿದೆ. ಹೀಗಾಗಿ ಅವರು ಈಗ ಕಾಂಗ್ರೆಸ್​​ ಸೋಷಿಯಲ್ ಮೀಡಿಯಾ ವಿಭಾಗದ ಭಾಗವಾಗಿದ್ದಾರಾ ಇಲ್ಲವಾ ಅನ್ನೋ ಅನುಮಾನ ಎದ್ದಿದೆ. ಈ ಬಗ್ಗೆ ರಮ್ಯಾ ಆಗಲೀ, ಕಾಂಗ್ರೆಸ್​​ ಆಗಲೀ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಟ್ವಿಟರ್​​ ಅಕೌಂಟ್​ ಡಿಲೀಟ್​ ಆದ ಬೆನ್ನಲ್ಲೇ ರಮ್ಯಾ ಕಾಂಗ್ರೆಸ್​​ನಿಂದ ದೂರವಾಗ್ತಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿರೋದಾಗಿ ಸುದ್ದಿ ಕೂಡ ಆಗಿತ್ತು. ಆದ್ರೆ ಈ ಬಗ್ಗೆ ಮಾಧ್ಯಮವೊಂದು ರಮ್ಯಾ ಅವರನ್ನ ಸಂಪರ್ಕಿಸಿದಾಗ, ಈ ಸುದ್ದಿ ಸುಳ್ಳು ಎಂದು ಅವರು ಹೇಳಿದ್ದಾರೆ. ಇನ್ನು ರಮ್ಯಾ ಬಗ್ಗೆ ಕಾಂಗ್ರೆಸ್​​ ಮೀಡಿಯಾ ವಿಭಾಗವನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version