ದಿನದ ಸುದ್ದಿ
ಚಿತ್ರದುರ್ಗ | ಯಳಗೋಡು ಗ್ರಾಮದಲ್ಲಿ ಮೊದಲಬಾರಿಗೆ ರಂಜಾನ್ ಆಚರಣೆ
ಸುದ್ದಿದಿನ,ಚಿತ್ರದುರ್ಗ : ಜಿಲ್ಲೆಯ ಯಳಗೋಡು ಗ್ರಾಮದಲ್ಲಿ ಹುಲ್ಲೆಹಾಳ್,ಮುದ್ದಾಪುರ,ಯಳಗೋಡು ಹಾಗೂ ಹಿರೆ ಕಬ್ಬಿಗೆರೆ ಮುಸ್ಲಿಂ ಬಾಂಧವರು ಸೇರಿ ರಂಜಾನ್ ಆಚರಿಸುವುದರ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.
ಇದೇ ಮೊದಲ ಬಾರಿಗೆ ಯಳಗೋಡು ಗ್ರಾಮದಲ್ಲಿ ಕುತ್ಬಾ ನಮಾಜ್ ಮಾಡಲಾಗಿದ್ದು, ಗ್ರಾಮದ ಎಲ್ಲಾ ಮುಸ್ಲಿಂ ಬಾಂದವರು ಸಂತೋಷ ಮತ್ತು ಸಡಗರದಿಂದ ರಂಜಾನ್ ಆಚರಿಸಿದರು.
ಈ ಸಂದರ್ಭದಲ್ಲಿ ಕಮಿಟಿಯ ಮುಖಂಡರಾದ ಹಾಜಿ ಹೊನ್ನೂರ್ ಸಾಬ್,ಗೂಡುಸಾಬ್ ಮತ್ತು ಯಳಗೋಡು ಟೀಪುಸಾಬ್,ಮಲ್ಲಿಕ್ ಸಾಬ್ ವಂಶಸ್ಥರು,ಹಾಗೂ ಮುದ್ದಾಪುರ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243