ಸಿನಿ ಸುದ್ದಿ

ರಾನು ಮೊಂಡಾಲ್ ಗಾಯನಕ್ಕೆ‌ ಮನಸೋತು 55 ಲಕ್ಷದ ಪ್ಲಾಟ್ ನೀಡಿದ ಸಲ್ಮಾನ್ ಖಾನ್

Published

on

ಸುದ್ದಿದಿನ,ಮುಂಬೈ: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಸೋಷಿಯಲ್ ಮಿಡಿಯಾಗಳದ್ದೆ ಹವಾ. ಅದರಲ್ಲೂ ಒಂದಿಷ್ಟು ಯವಕ ಯುವತಿಯರು ತಾವು ಮೈಮರೆತು ಸೋಷಿಯಲ್ ಮಿಡಿಯಾದಲ್ಲಿ ತಲ್ಲೀನರಾಗುತ್ತಾರೆ. ಹಾಡು ಮೋಜು ಮಸ್ತಿಗಳನ್ನು ಸೋಷಿಯಲ್ ಮಿಡಿಯಾಗಳಲ್ಲಿ ಹರಿಬಿಟ್ಟು ಎಷ್ಟೋ ಜನ ಸೆಲಬ್ರಿಟಿ ಆಗಿದ್ದು ಊಂಟು. ಅಂತಹದ್ದೆ ಘಟನೆ ಒಂದು ಟ್ರೈನ್ ಗಾಯಕಿಯ ಜೀವನವನ್ನೇ ಬದಲಿಸಿತ್ತು. ಆ ಅದ್ಭುತ ಸಂಗೀತದ ಪದ ಪುಂಜಗಳು.

ಹೌದು ಮುಂಬೈ ರೈಲ್ವೆ ನಿಲ್ದಾಣದಲ್ಲಿ ತನ್ನ ದಿನದ ಒಂದು ಹೊತ್ತಿನ ಊಟಕ್ಕೆ ಪರದಾಟ ಮಾಡುತ್ತಿದ್ದ ಮಹಿಳೆ ಇವತ್ತು ಸ್ಟಾರ್ ಗಾಯಕಿಯಾಗಿದ್ದು ರಾತ್ರೋ ರಾತ್ರಿ ತನ್ನ ಹಸಿವು ನೀಗಿಸಲು ರೈಲ್ವೆ ನಿಲ್ದಾಣದಲ್ಲಿ ಹಾಡು ಹೇಳಿಕೊಂಡು ಜೀವನ ನಡೆಸುತ್ತಿದ್ದ ಆಕೆಯ ಕಂಠಕ್ಕೆ ಇವತ್ತು ಲಕ್ಷಗಟ್ಟಲೆ ಸಂಭಾವನೆ ಅದು ಬೇರೆಯಾರು ಅಲ್ಲ. ರಾನು ಮೊಂಡಾಲ್.

ಇನ್ನು ಮುಂದೆ ಆಕೆಯ ಪರಿಚಯದ ಅಗತ್ಯವಿಲ್ಲ. ಅವರು ಒಂದು ತಿಂಗಳ ಹಿಂದೆ ರೈಲ್ವೆ ನಿಲ್ದಾಣವೊಂದರಲ್ಲಿ ಪತ್ತೆಯಾದಾಗಿನಿಂದ, ಇಡೀ ದೇಶಕ್ಕೆ ಅವರ ಪರಿಚಯವಾಗಿತ್ತು. ಹಿಮೇಶ್ ರೇಶಮ್ಮಿ ಅವರ ಮುಂದಿನ ಚಿತ್ರಕ್ಕಾಗಿ ಹಾಡಲು ಸಹಿ ಹಾಕಿದ ಅವರು ರಾತ್ರೋರಾತ್ರಿ ಖ್ಯಾತಿ ಗಳಿಸಿದರು. 59 ವರ್ಷ ವಯಸ್ಸಿನಲ್ಲಿ ರಾನುಗೆ ಒಲಿದು ಬಂದ ಭಾಗ್ಯ ಇದಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ರಾನು ಅವರ ಗಾಯನಕ್ಕೆ ಮನಸೋತು 55 ಲಕ್ಷದ ಮನೆ ಉಡುಗೊರೆಯಾಗಿ ನೀಡಿದ್ದಾರೆ. ಲೋಕೋಪಕಾರಿ ಎಂದು ಕರೆಯಲ್ಪಡುವ ಸಲ್ಮಾನ್, ರಾನು ಅವರ ಉತ್ತಮ ಪ್ರತಿಭೆಗೆ ಉಡುಗೊರೆಯಾಗಿ ಮನೆ ನೀಡಿ, ರಾನುಗೆ ಹೊಸ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರು. ಸೂಪರ್ ಸ್ಟಾರ್ ಸಲ್ಲು ಬಾಯ್ ತಮ್ಮ ಚಿತ್ರವಾದ ದಬಾಂಗ್ 3 ಗೆ ರಾನು ಅವರು ಹಾಡಲು ಸಹಿ ಹಾಕಲು ಹೇಳಿದ್ದು ಇದರಲ್ಲಿ ಅವರು ಕನಿಷ್ಠ ಎರಡು ಹಾಡುಗಳನ್ನು ರಾನು ಅವರಿಂದ ಹಾಡಿಸಲು ಯೋಜಿಸಿದ್ದಾರೆ.

ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ರಾನುನನ್ನು ಕಂಡುಹಿಡಿದಾಗ, ಅವಳು ಸೋಷಿಯಲ್ ಮಿಡಿಯಾಗಳಿಗೆ ಮಾತ್ರ ಸೀಮಿತವಾಗಿದ್ದರು. ಆದರೆ ಇವರಿಂದ ಗಾಯಕಿಯಾಗುವ ಸಾಮರ್ಥ್ಯವಿದೆ ಎಂದು ಭಾವಿಸಿದ ಕೂಡಲೇ ಅವರಿಗೆ ಮೇಕ್ ಓವರ್ ನೀಡಲಾಯಿತು ಮತ್ತು ಹಲವು ಮಾಧ್ಯಮ ಸಂಸ್ಥೆಗಳು ಸಂದರ್ಶನ ಮಾಡಿದ್ದವು ಮತ್ತು ರಿಯಾಲಿಟಿ ಶೋಗಳನ್ನು ಹಾಡುವಲ್ಲಿ ಭಾಗವಹಿಸುವ ಭರವಸೆ ನೀಡಿದರು.

ಸಲ್ಮಾನ್ ಅವರ ಉತ್ತಮ ಚಿಂತನಶೀಲತೆ ಪ್ರಶಂಸನೀಯವಾದ ಕೆಲಸ ಎಲ್ಲರ ಮೆಚ್ಚುಗೆ ಪಡೆದಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ, ಹಿಮೇಶ್ ಅವರು ರಾನು ಅವರಿಗೆ ಮೊದಲ ದೊಡ್ಡ ಬ್ರೇಕ್ ನೀಡಿದರು. ಡ್ಯಾನ್ಸ್ ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಹಿಮೇಶ್ ಅವರಿಗೆ ರಾನು ಅವರನ್ನು ಪರಿಚಯಿಸಲಾಯಿತು. ಇದು ಒಬ್ಬ ಉತ್ತಮ ಗಾಯಕಿಗೆ ಸಿಕ್ಕ ಮೊದಲ ಮೆಟ್ಟಿಲು ಆಗಿತ್ತು. ಆ ರಿಯಾಲಿಟಿ ಶೋನಲ್ಲಿ ಹಾಡಲು ಅವಕಾಶ ನೀಡಿದರು.
ರಾನು ಬಗ್ಗೆ ತಿಳಿದುಕೊಂಡ ನಂತರ ಮತ್ತು ಅವರ ಲೈವ್ ಹಾಡನ್ನು ಕೇಳಿದ ನಂತರ, ವೇದಿಕೆಯಲ್ಲಿ ನ್ಯಾಯಾಧೀಶರಾಗಿರುವ ಹಿಮೇಶ್ ರಾನು ಗಾಯನಕ್ಕೆ ಮನಸೋತು ಸಂತೋಷ ವ್ಯಕ್ತಪಡಿಸಿದರು. ರಾನು ಅವರಿಗೆ ಈ ಸ್ವರ “ದೇವರು ಕೊಟ್ಟ ಉಡುಗೊರೆ” ಎಂದು ಹೋಗಳಿದರು ತನ್ನ ಮುಂದಿನ ಚಿತ್ರ, ಹ್ಯಾಪಿ, ಹಾರ್ಡಿ ಮತ್ತು ಹೀರ್ ಎಂಬ ರೊಮ್ಯಾಂಟಿಕ್ ಹಾಸ್ಯ ಚಿತ್ರಕ್ಕೆ ರಾನುಗೆ ಹಾಡಲು ಸಹಿ ಹಾಕಲು ನಿರ್ಧರಿಸಿದರು.

“ಸಲ್ಮಾನ್ (ಖಾನ್) ಭಾಯ್ ಅವರ ತಂದೆ ಸಲೀಮ್ ಚಿಕ್ಕಪ್ಪ ಒಮ್ಮೆ ನನಗೆ ಸಲಹೆ ನೀಡಿದ್ದು, ಜೀವನದಲ್ಲಿ ನಾನು ಪ್ರತಿಭಾವಂತ ವ್ಯಕ್ತಿಯನ್ನು ಕಂಡಾಗ, ನಾನು ಎಂದಿಗೂ ಆ ವ್ಯಕ್ತಿಯನ್ನು ಪ್ರತಿಭೆ ಸಾಯಲು ಬಿಡಬಾರದು. ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು” ಎಂದರು.

ಆದರೆ ಇವತ್ತು ರಾನು ಅವರ ಕಂಠವನ್ನು ದೇಶಕ್ಕೆ ಪರಿಚಯಿಸಿ ಉತ್ತಮ ಸಂಭಾವನೆ ನೀಡಿದ ಹಿಮೇಶ್ ಒಂದು ಕಡೆಯದಾರೆ ರಾನುಗೆ ಸೂರು ಮಾಡಿಕೊಟ್ಟ ಕಲಾವಿದರ ಪ್ರೇಮಿ ಸಲ್ಮಾನ್ ಖಾನ್ ಹೃದಯವಂತಿಕೆ ಎಲ್ಲ ನಟರಿಗೂ ಮಾದರಿ ಎನಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version