ಸಿನಿ ಸುದ್ದಿ

ಅಭಿಮಾನಿಗಳಿಗಾಗಿ ಕಾರಿನ ಮೇಲೆ ಡ್ಯಾನ್ಸ್ ಮಾಡಿದ ರಣವೀರ್

Published

on

ಸುದ್ದಿದಿನ ಡೆಸ್ಕ್: ಅಭಿಮಾನಿಗಳಿಗೆ ಎಂದೂ ನಿರಾಸೆ ಮಾಡದ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಬುಧವಾರ ತಮ್ಮ ಕಾರಿನ ಮೇಲೇರಿ ನೃತ್ಯಮಾಡಿ ತಮ್ಮ ಫ್ಯಾನ್ಸ್ ಅನ್ನು ರಂಜಿಸಿದರು.

ಮುಂಬಯಿನ ಶಾಪಿಂಗ್ ಕಾಂಪ್ಲೆಕ್ಸ್ ಗೆ ತೆರಳಿದ್ದ ರಣವೀರ್ ಅವರನ್ನು ಕಂಡ ಅಭಿಮಾನಿಗಳು ಅವರನ್ನು ಸುತ್ತುವರೆದರು. ನೋಡನೋಡುತ್ತಿದ್ದಂತೆ ನೂರಾರು ಜನ ಸೇರಿ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಶುರು ಮಾಡಿದರು.

ಜನ ಹೆಚ್ಚುತ್ತಿದ್ದನ್ನು ಗಮನಿಸಿದ ಅವರು ಹೊರಗೆ ನಡೆದು ತಮ್ಮ ಕಾರಿನ ಮೇಲೇರಿ ಡ್ಯಾನ್ಸ್ ಮಾಡಿದರು. ಈ ವೇಳೆ ಅಭಿಮಾನಿಗಳು ಬಾಬಾ ಎಂದು ಕೂಗುತ್ತಿದ್ದರು.

ನೀಲಿ ಟೀ ಶರ್ಟ್ ಹಾಗೂ ಟ್ರಾಕ್ ಪ್ಯಾಂಟ್ ಧರಿಸಿದ್ದ ರಣವೀರ್ ಅವರು ಕಪ್ಪು ಗಾಗಲ್ ಹಾಕಿ ಅಭಿಮಾನಿಗಳತ್ತ ಕೈ ಬೀಸಿ ನಡೆದರು. ಅಷ್ಟರಲ್ಲಾಗಲೇ ಟ್ರಾಫಿಕ್ ಜಾಮ್ ಆಗಿತ್ತು.

Leave a Reply

Your email address will not be published. Required fields are marked *

Trending

Exit mobile version