ದಿನದ ಸುದ್ದಿ

ದಾವಣಗೆರೆ | ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ, 26 ಸಾವಿರ ದಂಡ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ತಾಲ್ಲೂಕು ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ನರಗನಹಳ್ಳಿ ಗ್ರಾಮದ ವೀರೇಶ್ ಎಂಬಾತ ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಗೆ 5 ವರ್ಷ ಸಜೆ ಹಾಗೂ 25 ಸಾವಿರ ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯಾಲದ ನ್ಯಾಯದೀಶರಾದ ಕೆಂಗಬಾಲಯ್ಯ ಆದೇಶಿಸಿದ್ದಾರೆ.

ನೊಂದ ಯುವತಿಯ ಪೋಷಕರು ಕೆಲಸದ ನಿಮಿತ್ತ ಹೊರಗೆ ಹೋದಾಗ ಆರೋಪಿ ವೀರೇಶ ನೊಂದ ಯುವತಿಗೆ ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿರುತ್ತಾನೆ. ಗರ್ಭಿಣಿಯಾದ ನೊಂದ ಯುವತಿ ಮದುವೆಯಾಗುವಂತೆ ಕೇಳಿದಾಗ ಆರೋಪಿ ಆಕೆಗೆ ಜೀವ ಬೆದರಿಕೆ ಹಾಕಿದ್ದು ಈ ಬಗ್ಗೆ ಗ್ರಾಮಾಂತರ ವೃತ್ತದಲ್ಲಿ ಪ್ರಕರಣ ದಾಖಲಾಗಿ ನಿರೀಕ್ಷಕರಾದ ಮಂಜುನಾಥ ಇವರು ಆರೋಪಿತರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಕಲಂ 376, 420, 506 ರಡಿ ಒಟ್ಟು 15 ವರ್ಷ ಸಜೆ ಹಾಗೂ 26 ಸಾವಿರ ದಂಡ ಪಾವತಿಸುವಂತೆ, ದಂಡ ಕೊಡಲು ತಪ್ಪಿದ್ದಲ್ಲಿ ಒಟ್ಟಾರೆ 1 ವರ್ಷ 7 ತಿಂಗಳು ಹೆಚ್ಚುವರಿಯಾಗಿ ಸೆರೆವಾಸ ವಿಧಿಸಿ ಆದೇಶಿಸಿರುತ್ತಾರೆ.

ದಂಡದ ಮೊತ್ತದಲ್ಲಿ ರೂ. 20 ಸಾವಿರಗಳನ್ನು ಪಿರ್ಯಾದುದಾರರಿಗೆ ಪರಿಹಾರವಾಗಿ ಕೊಡಬೇಕೆಂದು ಉಳಿದ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಮತ್ತು ನ್ಯಾಯಾಂಗ ಬಂಧನದಲ್ಲಿರುವ ಅವಧಿಯನ್ನು ಸೆಟ್ ಆಫ್ ಮಾಡಬೇಕೆಂದು ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ಇವರು ವಾದ ಮಂಡಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version