ದಿನದ ಸುದ್ದಿ

ಅತ್ಯಾಚಾರ | ದೂರು ನಿರಾಕರಿಸಿದ ಪೊಲೀಸ್ ; ಮಹಿಳೆ ಆತ್ಮಹತ್ಯೆ

Published

on

ಸುದ್ದಿದಿನ, ಲಖ್ನೊ : ಉತ್ತರ ಪ್ರದೇಶದ ಷಹಜಾನ್‌ಪುರದಲ್ಲಿ 28 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವಾಗಿದ್ದು, ಈ ಸಂಬಂಧ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ದೂರು ಸಲ್ಲಿಸಲು ಹೋದಾಗ ಅಲ್ಲಿನ ಪೊಲೀಸರು ಎಫ್.ಐ.ಆರ್ ದಾಖಲಿಸಲು ನಿರಾಕರಿಸಿದಾಗ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದು, ಮಹಿಳೆಯ ಪತಿ ರಾಮ್ ವೀರ್ ಎಂಬುವವರು “ಎಫ್.ಐ.ಆರ್ ದಾಖಲಿಸಲು ಪೊಲೀಸರು ನಿರಾಕರಿಸಿದರು, ಆರೋಪಿ ವಿನಯ್ ಕುಮಾರ್ ಆಕೆಯ ಮೇಲೆ ಒತ್ತಡತಂದು ಮಾತುಕತೆಗೆ ಒತ್ತಾಯಿಸಿದರು” ಎಂದು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಅಧೀಕ್ಷಕ ಎಸ್.ಎನ್.ಚಿನ್ನಪ್ಪ ಅವರು
” ಪೊಲೀಸ್ ಠಾಣೆಯ ಉಸ್ತುವಾರಿಗಳಾಗಿದ್ದ ಸುಭಾಷ್ ಕುಮಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ಗಳಾದ ಲೋಕೇಶ್ ಕುಮಾರ್ ಮತ್ತು ಲಾಲ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರತಿಕ್ರಿಸಿದ್ದಾರೆ. ಹಾಗೇ ಆರೋಪಿ ವಿನಯ್ ಕುಮಾರ್ ನನ್ನು ಬಂಧಿಸಲಾಗಿದ್ದು, ಈ ಘಟನೆಯಲ್ಲಿ ಯಾರೆಲ್ಲಾ ತಪಿತಸ್ಥರಿದ್ದಾರೆ ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version