ಸಿನಿ ಸುದ್ದಿ

ನಿವೇದಿತಾ ಗೌಡ ಜತೆ ಬರ್ತ್‍ಡೇ ಆಚರಿಸಿಕೊಂಡ ಚಂದನ್ ಶೆಟ್ಟಿ

Published

on

ಸುದ್ದಿದಿನ ಡೆಸ್ಕ್: ಬಿಗ್ ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ನಿವೇದಿತಾ ಗೌಡ ಕುಟುಂಬದ ಜತೆ ಭಾನುವಾರ ತಡರಾತ್ರಿ ಆಚರಿಸಿಕೊಂಡರು.

29ನೇ ವರ್ಷಕ್ಕೆ ಕಾಲಿಡುತ್ತಿರುವ ಚಂದನ್ ಶೆಟ್ಟಿ ಅವರ ನಾಗರಬಾವಿಯಲ್ಲಿರುವ ನಿವಾಸಕ್ಕೆ ನಿವೇದಿತಾ ಗೌಡ ಹಾಗೂ ಅವರ ತಾಯಿ ಭೇಟಿ ನೀಡಿದ್ದರು. ಈ ವೇಳೆ ಕೇಕ್ ಕತ್ತರಿಸಿದ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ತಿನ್ನಿಸಿದರು.

ಕೇಕ್‍ಅನ್ನು ಸಿಎಸ್ ಎಂದು ಡಿಸೈನ್ ಮಾಡಲಾಗಿತ್ತು. ಅಭಿಮಾನಿಗಳೂ ಕೂಡ ತಡರಾತ್ರಿಯಲ್ಲಿ ಚಂದನ್ ಶೆಟ್ಟಿ ಅವರನ್ನು ಭೇಟಿಯಾದರು.

Leave a Reply

Your email address will not be published. Required fields are marked *

Trending

Exit mobile version