ಸಿನಿ ಸುದ್ದಿ

ನೀವು ಈವರೆಗೆ ನೋಡಿರದ ಕಿಚ್ಚನ‌ ಚಿತ್ರಗಳು ಇಲ್ಲಿವೆ !

Published

on

ಸುದ್ದಿದಿನ ವಿಶೇಷ: ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತನ್ನದೇ ವಿಶಿಷ್ಟ ಸ್ಥಾನ ಗಳಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಯಾವುದೇ ಪಾತ್ರಕ್ಕೂ ಸಮರ್ಪಕ ನ್ಯಾಯ ಒದಗಿಸಿ ಅಭಿನಯಿಸುವ ಕಿಚ್ಚ ಸುದೀಪ್ ಬಹುತೇಕರಿಗೆ ಇಷ್ಟವಾಗುತ್ತಾರೆ. ಅವರ ಕಂಚಿನ ಕಂಠಕ್ಕೆ ಕನ್ನಡವೇ ಏಕೆ ಇಡೀ ಭಾರತೀಯ ಚಿತ್ರರಂಗ ಫಿದಾ ಆಗಿದೆ. ಈ ಕಾರಣಕ್ಕೆ ಅವರಿಗೆ ರಾಷ್ಟ್ರೀಯ ಮಟ್ಟದ ಸಿನೆಮಾ ಗಳಲ್ಲಿ ಮನ್ನಣೆ ಸಿಕ್ಕಿದೆ. ಇಂತಹ ಅಭಿನಯ ಚಕ್ರವರ್ತಿ ಒಂದು ಕಾಲದಲ್ಲಿ ಅವಕಾಶಕ್ಕಾಗಿ ಕಾದು ಕಷ್ಟ ಅನುಭವಿಸಿದ್ದರು. ಕೆಲವು ಬಾರಿ ಅವಮಾನ ಅನುಭವಿದ್ದರು. ಆರಂಭದ ದಿನಗಳಲ್ಲಿ ಸುದೀಪ್ ಕುರಿತು ಐರನ್ ಲೆಗ್ ಎಂದು ವಿರೋಧಿಗಳು ಅಪಹಾಸ್ಯ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಅವರ ಪ್ರತಿಭೆ ಅವರನ್ನು ಎತ್ತರಕ್ಕೆ ಬೆಳೆಸಿತು.

1999ರಲ್ಲಿ ತೆರೆ ಕಂಡ ತಾಯವ್ವ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಅದೇ ವರ್ಷ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಪ್ರತ್ಯರ್ಥ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದರು.
2000ರಲ್ಲಿ ತೆರೆ ಕಂಡ ಸುನೀಲ್ ಕುಮಾರ್ ದೇಸಾಯಿ ಅವರದೇ ನಿರ್ದೇಶನದ ಸ್ಪರ್ಶಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು. ಅಷ್ಟೇ ಅಲ್ಲ ನಿರ್ದೇಶಕರಾಗಿ, ನಿರ್ಮಾಪಕರಾಗಿ ಉತ್ತಮ ಚಿತ್ರಗಳನ್ನು ನೀಡಿದ್ದಾರೆ.

ಸುದೀಪ್ ಅವರ ಆರಂಭದ ದಿನಗಳಲ್ಲಿ ನಟಿಯರಾದ ರೇಖಾ, ಭಾವನಾ, ಪೂಜಾ ಲೋಕೇಶ್ ಅವರೊಂದಿನ ಅಪರೂಪದ ಚಿತ್ರಗಳು ಇಲ್ಲವೆ.

Keywords: kiccha sudeep photos hd, kiccha sudeep special and Rare images. And download sudeep photos images. sudeep image gallery.

Leave a Reply

Your email address will not be published. Required fields are marked *

Trending

Exit mobile version