/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಕರ್ನಾಟಕದ ಸಿಂಗಂಗೆ ಹುಟ್ಟುಹಬ್ಬದ ಸಂಭ್ರಮ

Published

on

ಸುದ್ದಿದಿನ ಡೆಸ್ಕ್: ನಿಷ್ಟಾವಂತ ಪೊಲೀಸ್ ಅಧಿಕಾರಿ ಎಂದೇ ರಾಜ್ಯಾದ್ಯಂತ ಖ್ಯಾತಿ ಗಳಿಸಿರುವ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರ ಸೋಮವಾರ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ.
ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತಿ ಗಳಿಸಿರುವ ಚೆನ್ನಣ್ಣನವರ್ ಅವರು ತಮ್ಮದೇ ಆದ ಕರ್ತವ್ಯ ವೈಖರಿಯಿಂದ ಹೆಸರು ಪಡೆದವರು. ಸದ್ಯ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತಿರುವ ಅವರು, ಬೆಳಗಾವಿ, ಶವಮೊಗ್ಗ, ಮೈಸೂರು ಮೊದಲಾದ ಕಡೆ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿಯಲ್ಲಿ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದಾಗ ಕೋಮು ಗಲಭೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದರು.
ಶಿವಮೊಗ್ಗದಲ್ಲಿ 2015ರಲ್ಲಿ ನಡೆದ ಹಿಂಸಾಚಾರವನ್ನು ಯಶಸ್ವಿಯಾಗಿ ಹತೋಟಿಗೆ ತಂದರು.
ಮಹಿಳೆಯರ ಸುರಕ್ಷತೆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಒನಕೆ ಓಬವ್ವ ಎಂಬ ತಂಡ ರಚಿಸಿದ್ದರು. ಮೊತ್ತ ಮೊದಲಬಾರಿಗೆ ಪೊಲೀಸ್ ಅಧಿಕಾರಿಗಳೊಟ್ಟಿಗೆ ಗ್ರಾಮ ವಾಸ್ಥವ್ಯ ಹೂಡಿ, ಜನಸ್ನೇಹಿ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾದರು.
ಚೆನ್ನಣ್ಣನವರ್ ಅವರಿಗೆ ಸುದ್ದಿದಿನ ಬಳಗದಿಂದ ಹುಟ್ಟುಹಬ್ಬದ ಶುಭಾಶಯಗಳು.

Leave a Reply

Your email address will not be published. Required fields are marked *

Trending

Exit mobile version