ದಿನದ ಸುದ್ದಿ
ಉಪನ್ಯಾಸಕ ರವಿಕುಮಾರ್. ಪಿ ಅವರಿಗೆ ಪಿ.ಎಚ್ ಡಿ ಪದವಿ
ಸುದ್ದಿದಿನ, ದಾವಣಗೆರೆ : ರವಿಕುಮಾರ್. ಪಿ ಅವರಿಗೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಡಾಕ್ಟರೇಟ್ (ಪಿ.ಎಚ್‍ಡಿ) ಪದವಿ ನೀಡಿದೆ.
ಕುವೆಂಪು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೋ. ಪಿ.ಎ.ವರ್ಗೀಸ್ ಅವರ ಮಾರ್ಗದರ್ಶನದಲ್ಲಿ “ರೋಲ್ ಆಫ್ ಕಮ್ಯೂನಿಕೇಷನ್ ಇನ್ ಸೋಶಿಯಲ್ ಕನ್ವರ್ಜೆನ್ಸ್ ಎಂಡ್ ಕಮ್ಯೂನಲ್ ಹಾರ್ಮೋನಿ: ಎ ಕೇಸ್ ಸ್ಟಡಿ ಇನ್ ಭದ್ರಾವತಿ” ಎಂಬ ಮಹಾ ಪ್ರಬಂಧವನ್ನು ಅವರು ಮಂಡಿಸಿದ್ದರು.
ರವಿಕುಮಾರ್. ಪಿ ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401