ದಿನದ ಸುದ್ದಿ

ಚೀನಾದಲ್ಲಿ ಭಾರತದ ನೋಟು ಪ್ರಿಂಟ್: ಆರ್ ಬಿ ಐ ಹೇಳಿದ್ದೇನು ಗೊತ್ತಾ?

Published

on

ಸುದ್ದಿದಿನ ಡೆಸ್ಕ್: ಚೀನಾದ ಖಾಸಗಿ ಕಂಪನಿಯೊಂದು ಭಾರತದ ನೋಟುಗಳನ್ನು ಮುದ್ರಿಸಲು ಗುತ್ತಿಗೆ ಪಡೆದಿದೆ ಎಂಬ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಲಗಳೆದಿದೆ.

ಆರ್ ಬಿ ಐ ಭಾರತದಲ್ಲಿ ಎರಡು ಮುದ್ರಣಾ ಘಟಕ ಹೊಂದಿದ್ದು, ಎಲ್ಲ ನೋಟುಗಳು ಅಲ್ಲೇ ಪ್ರಿಂಟ್ ಆಗಲಿವೆ ಎಂದು ಆರ್ ಬಿ ಐ ಮೂಲಗಳು ಸ್ಪಷ್ಟಪಡಿಸಿವೆ.

ಚೀನಾದ ಕಂಪನಿಯೊಂದು ಭಾರತ ಸೇರಿದಂತೆ ಇತರೆ ದೇಶಗಳ ನೋಟುಗಳನ್ನು ಮುದ್ರಿಸಲು ಗುತ್ತಿಗೆ ಪಡೆದಿದೆ ಎಂದು ಚೀನಾ ಪತ್ರಿಕೆ ವರದಿ ಮಾಡಿತ್ತು. ಪಾಕಿಸ್ತಾನಕ್ಕೆ ನಕಲಿ ನೋಟುಗಳನ್ನು ಮುದ್ರಿಸಲು ಇದು ನೆರವು ನೀಡುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

Leave a Reply

Your email address will not be published. Required fields are marked *

Trending

Exit mobile version