ರಾಜಕೀಯ
ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಸಕಲ ಸಿದ್ಧತೆ ; ನೂತನ ಸಚಿವರು ಯಾರ್ಯಾರು ಗೊತ್ತಾ..?
ಸುದ್ದಿದಿನ,ಬೆಂಗಳೂರು : ಸಚಿವ ಸಂಪುಟ ಪುನಾರಚನೆ ವಿಚಾರ ಈಗಾಗಲೇ ರಾಜ್ಯಪಾಲರನ್ನ ಭೇಟಿ ಮಾಡಲು ಸಿಎಂ ಕುಮಾರಸ್ವಾಮಿ ರಾಜ ಭವನಕ್ಕೆ ತೆರಳಿದ್ದಾರೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ಸಂಜೆ 5.20ಕ್ಕೆ ರಾಜಭವನದಲ್ಲಿ ನಡೆಯಲಿದಲಿದ್ದು, ಹೊಸದಾಗಿ ಪ್ರಮಾಣವಚನ ಇದಿಷ್ಟು ಶಾಸಕರು ಸ್ವೀಕರಿಸಲಿದ್ದಾರೆ.
- ಶಿವಳ್ಳಿ
- ಎಂಟಿಬಿ ನಾಗರಾಜ್
- ತುಕಾರಾಂ
- ಎಂ.ಬಿ.ಪಾಟೀಲ್
- ಪರಮೇಶ್ವರ ನಾಯಕ್
- ಸತೀಶ್ ಜಾರಕಿಹೊಳಿ
- ತಿಮ್ಮಾಪುರ
- ರಹೀಂಖಾನ್
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಹಿನ್ನೆಲೆ ರಾಜಭವನದಲ್ಲಿ 422 ಪೊಲೀಸರ ಅಧಿಕಾರಿಗಳ ನಿಯೋಜನೆ ಮಾಡಿದ್ದು ರಾಜಭವನ,ಬಸವೇಶ್ವರ ವೃತ್ತ ಸೇರಿದಂತೆ 18 ಸ್ಥಳಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. 2 ಎಸಿಪಿ,13 ಇನ್ಸ್ ಪೆಕ್ಟರ್ ಗಳು,62ಪಿಎಸ್ ಐಗಳು,195 ಕಾನ್ಸ್ ಟೇಬಲ್‌ಗಳನ್ನು ನಿಯೋಜಿಸಲಾಗಿದೆ.
ಇನ್ನೂ ಕೆಲವೇ ನಿಮಿಷಗಳಲ್ಲಿ ಡಿಜಿ ನೀಲಮಣಿರಾಜು ಹಾಗು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ರಿಂದ ಭದ್ರತೆ ಪರಿಶೀಲನೆ ನಡೆಯಲಿದ್ದು, ಪ್ರಮಾಣವಚನ ಕಾರ್ಯಕ್ರಮ ಕ್ಕೆ ನೀಡಲಾಗಿರುವ ಭದ್ರತೆ ಪರಿಶೀಲನೆ ನಡೆಸಲಿದ್ದಾರೆ ನೀಲಮಣಿರಾಜು.
ರಾಜಭವನ ಬಳಿ ಟೈಟ್ ಸೆಕ್ಯುರಿಟಿ
ಈಗಾಗಲೇ ರಾಜಭವನಕ್ಕೆ ಆಗಮಿಸಲಿರುವ ಸಿಎಂ ಕುಮಾರಸ್ವಾಮಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಜೊತೆ ನೂತನ ಸಚಿವರ ಪಟ್ಟಿಯೊಂದಿಗೆ ಆಗಮಿಸಿದ್ದಾರೆ. ರಾಜ್ಯಪಾಲರ ಭೇಟಿಗೆ ಕಾಲಾವಕಾಶ ಪಡೆದಿರುವ ಸಿಎಂ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ನಡೆಸಿದ್ದು,ಕಾರ್ಯಕ್ರಮದ ಸಿದ್ದತೆ ವೇದಿಕೆ ಅಲಂಕಾರಕ್ಕೆ11 ಗಂಟೆ ನಂತರ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಅಗತ್ಯ ಸಿದ್ದತೆ ನಡೆಸಲು ಅನುಮತಿ ಕೇಳಿದ್ದಾರೆ ವಿಧಾನಸೌಧದ ಅಧಿಕಾರಿಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401