ದಿನದ ಸುದ್ದಿ
ಬೆಂಗಳೂರು ಟೆಕ್ಕಿ ನಾಪತ್ತೆಗೆ ಒಎಲ್‍ಎಕ್ಸ್ ಜಾಹೀರಾತೇ ಕಾರಣ?
ಬೆಂಗಳೂರಿನ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆಗೆ ಒಎಲ್‍ಎಕ್ಸ್ ಜಾಹೀರಾತೇ ಕಾರಣವಾಯಿತೇ ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆಗೆ ಒಎಲ್‍ಎಕ್ಸ್ ಜಾಹೀರಾತೇ ಕಾರಣವಾಯಿತೇ ಎಂಬ ಅನುಮಾನ ಈಗ ವ್ಯಕ್ತವಾಗಿದೆ. ಅಜಿತಾಬ್ ತಾನು ಕೋಲ್ಕೊತಾದ ಐಐಎಂ ಸೇರುವ ಸಲುವಾಗಿ ಆರು ತಿಂಗಳ ಹಿಂದಷ್ಟೆ ಕೊಂಡುಕೊಂಡಿದ್ದ ಹೊಸ ಕಾರನ್ನು ಮಾರಾಟ ಮಾಡಲು ಉದ್ದೇಶಿಸಿದ್ದರು. ಒಎಲ್‍ಎಕ್ಸ್ ಆನ್ ಲೈನ್ ಜಾಹೀರಾತು ತಾಣದಲ್ಲಿ ಈ ಕುರಿತು ವಿವರ ದಾಖಲಿಸಿದ್ದರು ಎಂದು ಕಾಣೆಯಾಗಿರುವ ಅಜಿತಾಬ್ ಸಹೋದರ ಸಂಬಂಧ ತಿಳಿಸಿದ್ದಾರೆ.
ಈ ಬಗ್ಗೆ ವಿಚಾರಿಸಿಕೊಂಡು ಹಲವರು ಕರೆ ಮಾಡುತ್ತಿದ್ದರು. ಆತ ಅದಕ್ಕೆ ಉತ್ತರಿಸುತ್ತಿದ್ದ. ನಾಪತ್ತೆಯಾಗುವ ಮುನ್ನ ಆತ ವೈಟ್‍ಫೀಲ್ಡ್‍ನಲ್ಲಿ ನನ್ನನ್ನು ಭೇಟಿಯಾಗಿದ್ದ. ಬಹುಶಃ ಆತ ತನ್ನ ಕಾರನ್ನು ಗಿರಾಕಿಯೊಬ್ಬರಿಗೆ ತೋರಿಸಲು ಹೋಗಿರಬಹುದು ಇದೇ ವೇಳೆ ಆತನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಎಂ ಮನೆ ಮುಂದೆ ಪ್ರತಿಭಟನೆ ಎಚ್ಚರಿಕೆ?
ಬೆಂಗಳೂರಿನಲ್ಲಿ ನಡೆದ ಟೆಕ್ಕಿ ನಾಪತ್ತೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ನಾಪತ್ತೆಯಾಗಿರುವ ಕುಮಾರ್ ಅಜಿತಾಬ್ ಅವರ ಕುಟುಂಬ ವರ್ಗ ಆಗ್ರಹಿಸಿದೆ.
ಕಳೆದ ಹದಿನೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಅಜಿತಾಭ್ ನಾಪತ್ತೆ ಪ್ರಕರಣದಿಂದ ರೋಸಿಹೋಗಿದ್ದು, ಪೊಲೀಸರು ಡ್ರೋಣ್, ಡಾಗ್ ಸ್ಕ್ವಾಡ್ ಇದ್ದರೂ ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಆದ ಕಾರಣ ಇದನ್ನು ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಅಜಿತಾಭ್ ಅವರ ಸಹೋದರಿ ಪ್ರಾಗ್ಯ ಸಿನ್ಹ ಅವರು ಬೆಂಗಳೂರಿನಲ್ಲ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ಖಂಡಿತವಾಗಿಯೂ ನಾಪತ್ತೆ ಪ್ರಕರಣವಲ್ಲ. ಯಾರೋ ಉದ್ದೇಶಪೂರ್ವಕವಾಗಿ ನನ್ನ ತಮ್ಮನನ್ನು ಅಪಹರಿಸಿದ್ದಾರೆ. ಆರೋಪಿಗಳು ಸಿಗಬೇಕೆಂದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.