ದಿನದ ಸುದ್ದಿ
ರೆಸಿಪಿ | ಬೆಟ್ಟದ ನೆಲ್ಲಿಕಾಯಿ ಚಿತ್ರಾನ್ನ ಮಾಡೋದು ಹೀಗೆ ನೋಡಿ..!
- ಶಶಿಕಲಾ ಸುನೀಲ್, ಗಾಯಕಿ, ಬೆಂಗಳೂರು
ಬೇಕಾಗುವ ಸಾಮಗ್ರಿಗಳು
- ಬೆಟ್ಟದ ನೆಲ್ಲಿಕಾಯಿ – 8
- ಬ್ಯಾಡಗಿ ಮೆಣಸಿನಕಾಯಿ – 10
- ಬಿಳಿ ಎಳ್ಳು – ಅರ್ಧ ಚಮಚ
- ರಸಂ ಪುಡಿ – 1 ಚಮಚ
- ತೆಂಗಿನತುರಿ – 4 ಚಮಚ
- ಸಾಸಿವೆ – ಕಾಲು ಚಮಚ
- ಕಡಲೆಬೇಳೆ – ಅರ್ಧ ಚಮಚ
- ಕಡಲೆಕಾಯಿಬೀಜ – 2 ಚಮಚ
- ಇಂಗು – ಅರ್ಧ ಚಮಚ
- ಕರಿಬೇವು – 1 ಕಡ್ಡಿ
- ಬೆಲ್ಲ – ನಿಂಬೆ ಗಾತ್ರ
- ಉಪ್ಪು – ರುಚಿಗೆ
- ಕೊತ್ತಂಬರಿ ಸೊಪ್ಪು
- ಎಣ್ಣೆ – 3 ಚಮಚ
- ಕೊಬ್ಬರಿ ಎಣ್ಣೆ – 2 ಚಮಚ
- ಅನ್ನ
ಮಾಡುವ ವಿಧಾನ
ಮಿಕ್ಸಿ ಜಾರಿನಲ್ಲಿ ಬ್ಯಾಡಗಿ ಮೆಣಸಿನಕಾಯಿ, ಬಿಳಿ ಎಳ್ಳು, ಬೀಜ ತೆಗೆದ ಬೆಟ್ಟದ ನೆಲ್ಲಿಕಾಯಿ ಹಾಕಿ ರುಬ್ಬಿ. ನಂತರ ಕಾಯಿತುರಿ ಸ್ವಲ್ಪವೇ ನೀರು ಸೇರಿಸಿ ತರಿ ತರಿಯಾಗಿ ರುಬ್ಬಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕಡಲೆಬೇಳೆ, ಕಡಲೆಕಾಯಿ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ರುಬ್ಬಿದ ಮಿಶ್ರಣ, ಬೆಲ್ಲ, ರಸಂ ಪುಡಿ, ರುಚಿಗೆ ಉಪ್ಪು ಹಾಕಿ 5 ನಿಮಿಷ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ನಂತರ ಅದಕ್ಕೆ ಅನ್ನ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡುವಾಗ ಕೊಬ್ಬರಿ ಎಣ್ಣೆಯನ್ನು ಹಾಕಿ. ಬಿಸಿ ಬಿಸಿಯಾಗಿ ಸವಿಯಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243