ದಿನದ ಸುದ್ದಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆ | ಮರು ಎಣಿಕೆ ; ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಅವಕಾಶ
ಸುದ್ದಿದಿನಡೆಸ್ಕ್:ಪ್ರಸ್ತುತ 2024-25 ನೇ ಸಾಲಿನಿಂದ ಸ್ಕ್ಯಾನ್ ಪ್ರತಿ, ಮರು ಎಣಿಕೆಗೆ ಮತ್ತು ಮರು ಮೌಲ್ಯ ಮಾಪನಕ್ಕೆ ಕರ್ನಾಟಕ 1ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಕ್ಯಾನ್ ಪ್ರತಿಗಳನ್ನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ 7ರ ವರೆಗೆ ಅವಕಾಶವಿದೆ.
ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಅರ್ಜಿ ಸಲ್ಲಿಸಿದ ನಂತರ ಚಲನ್ ಡೌನ್ ಲೋಡ್ ಮಾಡಿ ಶುಲ್ಕ ಪಾವತಿಸಲು ಇದೇ 8ರ ವರೆಗೆ ಕಾಲವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇದೇ 4ರಿಂದ 11ರವರೆಗೆ ಅವಕಾಶ ಇದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಡಿದಂತೆಯೇ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೂ ಈ ವರ್ಷ ಇನ್ನೆರಡು ಪರೀಕ್ಷೆಯ ಅವಕಾಶ ನೀಡಲಾಗುತ್ತಿದೆ.
ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ. ಎಸ್.ಎಸ್.ಎಲ್.ಸಿ. 2025ರ ಪರೀಕ್ಷೆ -2 ಅನ್ನು ಇದೇ 26 ರಿಂದ ಜೂನ್ 2 ವರೆಗೆ ಹಾಗೂ ಪರೀಕ್ಷೆ 3 ಜೂನ್ 23 ರಿಂದ 30 ರವರೆಗೆ ನಡೆಸಲಾಗುವುದು. ಪರೀಕ್ಷೆ -2 ಕ್ಕೆ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ನಾಳೆಯಿಂದ ಇದೇ ಹತ್ತರ ವರೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243