ಕ್ರೀಡೆ
ಹಿಮಾದಾಸ್ ಸ್ವಾಗತಕ್ಕೆ ಕಾದಿತ್ತು ವಿಶೇಷ ರೆಡ್ ಕಾರ್ಪೆಟ್
ಸುದ್ದಿದಿನ ಡೆಸ್ಕ್: ಏಷ್ಯನ್ ಗೇಮ್ಸ್‍ನಲ್ಲಿ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಗಳಿಸುವ ಮೂಲಕ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ದ ಅಥ್ಲಿಟ್ ಹಿಮಾದಾಸ್ ಅವರನ್ನು ಸ್ವಾಗತಿಸಲು ಗುವಹಾಟಿ ವಿಮಾನ ನಿಲ್ದಾಣದಲ್ಲಿ ವಿಶೇಷ ರೆಡ್ ಕಾರ್ಪೆಟ್‍ವೊಂದು ಕಾದಿತ್ತು.
ವಿಮಾನ ನಿಲ್ದಾಣದ ರೆಡ್ ಕಾರ್ಪೆಟ್‍ಅನ್ನು ಸಿಂಥೆಟಿಕ್ ಟ್ರಾಕ್ ಮಾದರಿಯಲ್ಲಿ ಬದಲಿಸಿ ಅದನ್ನು ಹಿಮಾದಾಸ್ ಅವರಿಗೆಂದೇ ಕಾದಿರಿಸಲಾಗಿತ್ತು. ವಿಮಾನ ನಿಲ್ದಾಣಕ್ಕೆ ಬಂದ ಹಿಮಾ ಅವರು ಕಾರ್ಪೆಟ್ ನೋಡಿ ದಂಗಾಗಿಹೋದರು.
ಸ್ವಾಗತಕ್ಕಾಗಿ ಕಾದಿದ್ದ ಅಪ್ಪನನ್ನು ಅಪ್ಪಿ ತಮ್ಮ ಖುಷಿ ವ್ಯಕ್ತಪಡಿಸಿದರು.