ಲೈಫ್ ಸ್ಟೈಲ್

ರೆಡ್ ಕ್ಯಾರೆಟ್ (ದೆಹಲಿ ಕ್ಯಾರೆಟ್) ಹಲ್ವ

Published

on

ಕ್ಯಾರೇಟ್ ಹಲ್ವ ಮಾಡೋಕೆ ಸುಲಭ.ಆದರೆ ತಿನ್ನಲು ಬಹಳ ಸೊಗಸು. ಆದರೆ ಸಿಹಿಗೆ ಸಕ್ಕರೆ ಬದಲು ಜೋನಿ ಬೆಲ್ಲ ಬಳಸೋದು ತುಂಬಾ ರುಚಿ.

ರೆಡ್ ಕ್ಯಾರೆಟ್ ಹಲ್ವ ಮಾಡಲು ಬೇಕಾಗುವ ಸಾಮಗ್ರಿಗಳು

  1. ರೆಡ್ ಕ್ಯಾರೇಟ್ -ಅರ್ಧ ಕಿಲೋ
  2. ತುಪ್ಪ -1ಕಪ್
  3. ಹಾಲು -1ಕಪ್
  4. ಜೋನಿ‌ ಬೆಲ್ಲ -1ಕಪ್
  5. ದ್ರಾಕ್ಷಿ ,ಗೋಡಂಬಿ -1ಹಿಡಿ

ಮಾಡುವ ವಿಧಾನ

ಮೊದಲು ಸ್ಕಿನ್ನರ್ ನಿಂದ ರೆಡ್ ಕ್ಯಾರೆಟ್ ನ ಸಿಪ್ಪೆ ತೆಗೆದು ತುರಿದುಕೊಳ್ಳಿ.ನಂತರ 5ಚಮಚ ತುಪ್ಪ ಹಾಕಿ ಕ್ಯಾರೇಟ್ ತುರಿಯನ್ನು ತುಪ್ಪ ದಲ್ಲಿ 5ನಿಮಿಷ ಹುರಿದು ಬೆಲ್ಲ ಸೇರಿಸಿ ಮತ್ತೆ ಹುರಿಯಿರಿ.ಅರ್ಧ ಬೆಂದಾಗ ಹಾಲು ಸೇರಿಸಿ ಚೆನ್ನಾಗಿ ಕುದಿಸಿ .ಮತ್ತೆ ಉಳಿದ ತುಪ್ಪ ಸೇರಿಸಿ ಸೌಟಿನಿಂದ ಚೆನ್ನಾಗಿ ತಿರುವಿ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿ ಸವಿಯಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version