ದಿನದ ಸುದ್ದಿ
ಭಾರತದಲ್ಲಿ ಬಡತನ ಪ್ರಮಾಣ ಇಳಿಕೆ : ವಿಶ್ವ ಬ್ಯಾಂಕ್
ಸುದ್ದಿದಿನ ಡೆಸ್ಕ್ : ಭಾರತದಲ್ಲಿ ಬಡತನ ಪ್ರಮಾಣ 2011ಕ್ಕೆ ಹೋಲಿಸಿದರೆ 2019ರಲ್ಲಿ ಶೇ.12.3ರಷ್ಟು ಇಳಿಕೆಯಾಗಿದೆ. 2011ರಲ್ಲಿ ತಲಾವಾರು ಬಡತನ ದರ ಶೇ.22.5ರಷ್ಟು ಇತ್ತು, ಅದು 2019ರಲ್ಲಿ ಶೇ.10.2ಕ್ಕೆಇಳಿಕೆಯಾಗಿದೆ.
ವಿಶ್ವ ಬ್ಯಾಂಕ್ ನ ನೀತಿ ಸಂಶೋಧನಾ ಕಾರ್ಯಪತ್ರದಲ್ಲಿ, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಬಡತನ ಪ್ರಮಾಣ ಇಳಿಕೆ ಅತ್ಯಧಿಕವಾಗಿದೆ. 2011ರಿಂದ 2019ರ ನಡುವೆ ಗ್ರಾಮೀಣ ಬಡತನ ಪ್ರಮಾಣ ಶೇ.14.7ರಷ್ಟು ಮತ್ತು ನಗರ ಬಡತನ ಪ್ರಮಾಣ ಶೇ.7.9ರಷ್ಟು ಕುಸಿತವಾಗಿದೆ.
ಅಧ್ಯಯನದ ಪ್ರಕಾರ, ಮಧ್ಯಮ ಹಿಡುವಳಿ ಹೊಂದಿರುವ ರೈತರ ಅದಾಯ ಹೆಚ್ಚಾಗಿದೆ. 2013 ಹಾಗೂ 2019ರಲ್ಲಿ ಎರಡು ಸುತ್ತಿನಲ್ಲಿ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ಸಣ್ಣ ಹಿಡುವಳಿದಾರರ ವಾರ್ಷಿಕ ಆದಾಯ ಶೇ.10ರಷ್ಟು ಹೆಚ್ಚಳವಾಗಿದೆ. ದೊಡ್ಡ ಹಿಡುವಳಿದಾರರ ಆದಾಯದಲ್ಲೂ ಶೇ.2ರಷ್ಟು ವೃದ್ಧಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243