ರಾಜಕೀಯ
ಸಿದ್ದು ಕಳುಹಿಸಿದ ಹೊಸ ಪದಾಧಿಕಾರಿಗಳ ಪಟ್ಟಿ ರಿಜೆಕ್ಟ್..!
ಸುದ್ದಿದಿನ ಡೆಸ್ಕ್ | ಸಿದ್ದರಾಮಯ್ಯ ಕಳುಹಿಸಿದ ಕೆಪಿಸಿಸಿ ಹೊಸ ಪದಾಧಿಕಾರಿಗಳ ಪಟ್ಟಿ ರಿಜೆಕ್ಟ್ ಆಗಿದೆ. ಕೆಪಿಸಿಸಿಗೆ ಪಧಾದಕಾರಿಗಳನ್ನು ಶಿಫಾರಸ್ಸು ಮಾಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ. ಸಿದ್ದ ರಾಮಯ್ಯ ಪಟ್ಟಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ರಾಹುಲ್ ಗಾಂಧಿ.
ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಕೆಪಿಸಿಸಿ ಪದಾಧಿಕಾರಿ ನೇಮಕವಾಗಬೇಕು ಎಂದು ಒತ್ತಾಯ ಮಾಡಿದ ಸಿದ್ದರಾಮಯ್ಯ. ಪ್ರಾದೇಶಿಕವಾರು, ಜಾತಿವಾರು ನೇಮಕ ಚುನಾವಣೆಯಲ್ಲಿ ಲಾಭವಾಗಲಿದೆ ಎಂದು ಮನವರಿಕೆ ಮಾಡಲು ಯತ್ನಿಸಿದ್ದರು.
ಸಿದ್ದರಾಮಯ್ಯರ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದ ಹೈಕಮಾಂಡ್ ,ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕವೇ ಪದಾಧಿಕಾರಿಗಳ ನೇಮಕ ಮಾಡಲಾಗುವುದೆಂದು ಹೇಳಿದೆ.
ಪದಾಧಿಕಾರಿಗಳ ನೇಮಕ ಜವಾಬ್ದಾರಿ ಸಂಪೂರ್ಣ ಕೆ ಸಿ ವೇಣುಗೋಪಾಲ್ ಗೆ ವಹಿಸಿದ್ದು, ಸಮ್ಮಿಶ್ರ ಸರಕಾರಕ್ಕೆ ಮುಜುಗರ ತರೋ ರೀತಿ ವರ್ತಿಸಿದ್ದ ಸಿದ್ದರಾಮಯ್ಯ ಈಗ ಸಂಪೂರ್ಣ ಸೈಡ್ ಲೈನ್ ಆಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401