ದಿನದ ಸುದ್ದಿ
ರೇಣುಕಸ್ವಾಮಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆಯಾಗಲಿ : ಜಂಗಮ ಸಮಾಜ ಪ್ರತಿಭಟನೆ
ಸುದ್ದಿದಿನ,ಮಸ್ಕಿ:ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಮಸ್ಕಿ ಜಂಗಮ ಸಮಾಜ ವತಿಯಿಂದ ನಮ್ಮ ಸಮುದಾಯದ ಚಿತ್ರದುರ್ಗದ ರೇಣುಕ ಸ್ವಾಮಿಯನ್ನು ಕೊಲೆಗೈದ ಕೊಲೆಗಡಕರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಗಚ್ಚಿನ ಹಿರೇಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಂಗಮ ಸಮಾಜದ ಅಧ್ಯಕ್ಷ ಕರಿಬಸಯ್ಯಸ್ವಾಮಿ ಸಿಂಧನೂರು ಮಠ ಸಗರೇಶ ಬಳಗಾನೂರ್ ಶಿವಕುಮಾರ್ ಕಡಮುಡಿ ಮಠ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಚಂದ್ರಶೇಖರ್ ಕ್ಯಾತನಟ್ಟಿ ಡಾಕ್ಟರ್ ಪಂಚಾಕ್ಷರಯ್ಯ ಕಂಬಳಿ ಮಠ ಸಮಾಜದ ಮುಖಂಡರು ಶ್ರೀಮಠದಲ್ಲಿ ಸಭೆಯಲ್ಲಿ ನಮ್ಮ ಸಮಾಜದ ಮೇಲೆ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿದ್ದು .ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಾವನ್ನಪ್ಪಿದ ಸಮಾಜದ ರೇಣುಕಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ರೇಣಿಕಾಸ್ವಾಮಿ ಪತ್ನಿ ತುಂಬಿದ ಬಸುರಿ ಅವರಿಗೆ ಪರಿಹಾರ ನೀಡಬೇಕು. ದುಡ್ಡು ಇದೆ ಎಂಬ ಅಹಂಕಾರದಿಂದ .ಯಾರನ್ನು ಬೇಕಾದರೂ ಕೊಲೆ ಮಾಡುವ ಕೊಲೆಗಡಕರನ್ನು ಗಡಿ ಪಾರು ಮಾಡಬೇಕೆಂದು ಖಂಡನೆಯ ಎಂದು ಹೋರಾಟದೊಂದಿಗೆ ಸಭೆಯಲ್ಲಿ ಮಾತನಾಡಿದರು.
ಜಂಗಮಬಾಂಧವರು ಬಸವೇಶ್ವರ ಸರ್ಕಲ್ ತಹಸಿಲ್ ಆಫೀಸುವವರಿಗೆ ದಂಡಾಧಿಕಾರಿಗಳು ಮುಖಾಂತರ ..ಗ್ರಹ ಇಲಾಖೆ ಸರಕಾರಕ್ಕೆ ತಶೀಲ್ದಾರ್ ಸಿರಸ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಂಗಮ ಸಮಾಜದ ಮುಖಂಡ ತಾಲೂಕು ಅಧ್ಯಕ್ಷ .ಘನ ಮಠದಯ್ಯ ಸ್ವಾಮಿ ಸಾಲಿಮಠ. ಮಾತನಾಡಿ ಸಮಾಜದ ರೇಣುಕಾ ಸ್ವಾಮಿ ಅವರಿಗೆ ಅನ್ಯಾಯವಾಗಿದೆ ಪದೇ ಪದೇ ಸಮಾಜದಲ್ಲಿ ಇಂಥ ಘಟನೆ ನಡೆಯುತ್ತಿದ್ದು ಕೊಲೆ ಮಾಡಿದ ಆರೋಪಿಗಳಿಗೆ ಉಗ್ರ ಕಠಿಣ ಶಿಕ್ಷೆ ವಿಧಿಸಬೇಕು .ಹಾಗೂ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಕೊಲೆಯಾಯಿತು. ಇದೇ ತರ ನಮ್ಮ ಸಮಾಜದವರ ಮೇಲೆ ಘಟನೆಗಳ ಮರುಕಳಿಸುತ್ತವೆ. ಗಂಭೀರವಾಗಿ ಸರ್ಕಾರ ಪರಿಗಣಿಸಿ ಅನ್ಯಾಯವಾದ ರೇಣುಕಾ ಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅವರಿಗೆ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ ಪಕಡದಿನ್ನಿ ಹಿರೇಮಠ ಆದಯ್ಯ ಸ್ವಾಮಿ ಸಿದ್ದಲಿಂಗಯ್ಯ ಸೊಪ್ಪಿಮಠ ಶಿವಪುತ್ರಯ್ಯ ಸ್ವಾಮಿ ಮಾಲಿ ಮಠ ಮೆದಿಕಿನಾಳ ಬಸವರಾಜ್ ಸ್ವಾಮಿ ಹಿರೇಮಠ ಅಸಮಕಲ್ ಯುವ ಘಟಕದ ಅಧ್ಯಕ್ಷರು ಶಿವಕುಮಾರ್ ಕಡಾಮುಡಿ ಮಠ ವೀರೇಶ್ ಶಂಭು ಕಂಬಳಿ ಮಠ ಶಿವು ಮಹೇಶ್ ಕೊಟ್ಟೂರು ಮಠ ಹಾಗೂ ನಿರಂಜನ್ ವಟಗಲ್ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243