ದಿನದ ಸುದ್ದಿ
ರೆಪೊ ದರ ಶೇಕಡ 4.9 ರಷ್ಟು ಹೆಚ್ಚಳ ; 3ನೇ ತ್ರೈಮಾಸಿಕದಲ್ಲಿ ಹಣದುಬ್ಬರ ಶೇಕಡ 6ಕ್ಕಿಂತ ಹೆಚ್ಚು : ಆರ್‌ಬಿಐ ಗೌವರ್ನರ್ ಶಕ್ತಿಕಾಂತ್ ದಾಸ್
ಸುದ್ದಿದಿನ ಡೆಸ್ಕ್ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು ರೆಪೊ ದರವನ್ನು 50 ಮೂಲಾಂಕಗಳಿಂದ ಶೇಕಡ 4.90 ರಷ್ಟು ಹೆಚ್ಚಿಸಿದೆ. ವಿತ್ತೀಯ ನೀತಿ ಸಮಿತಿಯ ಸಭೆಯಲ್ಲಿ ದರಗಳನ್ನು 40 ಮೂಲಾಂಕಗಳಿಂದ ಹೆಚ್ಚಿಸಿದ ನಂತರ, ಪ್ರಸ್ತುತ ರೆಪೊ ದರ ಶೇಕಡ 4.40 ಆಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರಗಳನ್ನು 50 ಮೂಲಾಂಕಗಳಷ್ಟು ಹೆಚ್ಚಿಸಿದ್ದಾರೆ.
ಸ್ಥಾಯಿ ಠೇವಣಿ ಸೌಲಭ್ಯ ದರ ಈಗ ಶೇಕಡ ೪.೬೫ ರಷ್ಟಿದ್ದರೆ, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರ ಶೇಕಡ ೫.೧೫ ರಷ್ಟಿದೆ. ರಷ್ಯಾ-ಉಕ್ರೇನ್ ಯುದ್ಧ, ಜಾಗತಿಕ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಹಣದುಬ್ಬರ ಸಹಿಷ್ಣುತೆಯ ಮಟ್ಟ ಮೀರಿ ತೀವ್ರವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆ ಚೇತರಿಕೆಯ ಪ್ರಕ್ರಿಯೆಯು ಸಹ ಪರಿಣಾಮ ಬೀರುತ್ತಿದೆ. ಆದರೆ ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆ ಎಂದರು. ಅಸಾಧಾರಣ ಸೌಕರ್ಯಗಳನ್ನು ಕ್ರಮೇಣ ಹಿಂತೆಗೆದುಕೊಳ್ಳಲಾಗುವುದು, ನಮ್ಮ ಆರ್ಥಿಕತೆಯ ಮೇಲೆ ಭೌಗೋಳಿಕ, ರಾಜಕೀಯ ಬಿಕ್ಕಟ್ಟಿನ ಪರಿಣಾಮವನ್ನು ತಗ್ಗಿಸುವಲ್ಲಿ ಆರ್.ಬಿ.ಐ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ವಿವಿಧ ಹಂತಗಳನ್ನು ಮಾಪನಾಂಕ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಣಕಾಸು ವರ್ಷ- 2023ರ ಅಂದಾಜು ಹಣದುಬ್ಬರವನ್ನು ಹಿಂದಿನ ಶೇಕಡಾ 5.7 ರಿಂದ ಶೇಕಡಾ 6.7 ಕ್ಕೆ ಆರ್.ಬಿ.ಐ ಪರಿಷ್ಕರಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರ ಶೇಕಡಾ 6 ಕ್ಕಿಂತ ಹೆಚ್ಚಾಗಿರುತ್ತದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
“ಹಣದುಬ್ಬರವನ್ನು ಗುರಿಯ ಮಟ್ಟಕ್ಕೆ ಇಳಿಸುವುದರ ಮೇಲೆ ನಮ್ಮ ಕ್ರಮಗಳನ್ನು ಕೇಂದ್ರೀಕರಿಸಲಾಗುತ್ತದೆ” ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.
ಏಪ್ರಿಲ್-ಜೂನ್‌ಗೆ ಹಣದುಬ್ಬರ ದರವನ್ನು ಶೇಕಡ 6.3 ರಿಂದ ಶೇಕಡ 7.5 ಕ್ಕೆ ಪರಿಷ್ಕರಿಸಲಾಗಿದೆ, ಜುಲೈ-ಸೆಪ್ಟೆಂಬರ್‌ಗೆ ಅದನ್ನು ಶೇಕಡ 5.8ರಿಂದ ಶೇಕಡ 7.4 ಕ್ಕೆ ಪರಿಷ್ಕರಿಸಲಾಗಿದೆ. ಅಕ್ಟೋಬರ್-ಡಿಸೆಂಬರ್‌ನ ಹಣದುಬ್ಬರ ನಿರೀಕ್ಷೆಯನ್ನು ಶೇಕಡಾ 5.4 ರಿಂದ ಶೇಕಡಾ 6.2ಕ್ಕೆ ಪರಿಷ್ಕರಿಸಲಾಗಿದೆ, ಆದರೆ 2023 ರ ಜನವರಿ-ಮಾರ್ಚ್ ವೇಳೆಗೆ ಅದನ್ನು ಶೇಕಡಾ 5.1 ರಿಂದ ಶೇಕಡಾ 5.8ಕ್ಕೆ ನವೀಕರಿಸಲಾಗಿದೆ. 2023ಹಣಕಾಸು ವರ್ಷಕ್ಕೆ ಜಿಡಿಪಿ ಮುನ್ಸೂಚನೆಯನ್ನು ಶೇಕಡ 7.2ರಲ್ಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
Media interaction on RBI’s Monetary Policy with Shri Shaktikanta Das, Governor, RBI https://t.co/Ad5NN5ewHU
— ReserveBankOfIndia (@RBI) June 8, 2022
Highlights of Monetary Policy announcement made by @RBI Governor @DasShaktikanta on June 8, 2022
#rbitoday #rbigovernor#rbikehtahai #RBIPolicy pic.twitter.com/tLMuqgwSsM— RBI Says (@RBIsays) June 8, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243