ದಿನದ ಸುದ್ದಿ

ಸಂಶೋಧಕ ವೆಂಕಟಾಚಲ ವಿ.ಎಸ್. ಅವರಿಗೆ ರಾಜ್ಯ ಯುವ ರತ್ನ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ಬೆಂಗಳೂರು: ನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಸಂಭಾಗಣದಲ್ಲಿ ನಡೆದ ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ (ರಿ) ಕೇಶವಾರ, ಚಿಕ್ಕಬಳ್ಳಾಪುರ ವತಿಯಿಂದ ಕೊಡಮಾಡುವ 2021 ನೇ ಸಾಲಿನ ರಾಜ್ಯ ಯುವ ರತ್ನ ಪ್ರಶಸ್ತಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ವೆಂಕಟಾಚಲ ವಿ.ಎಸ್. ಅವರಿಗೆ ಲಭಿಸಿದೆ.

ಇದೇ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಒಡ್ಡರಹಳ್ಳಿ ನಿವಾಸಿ ವೆಂಕಟಾಚಲ ವಿ.ಎಸ್. ಅವರ ಶಿಕ್ಷಣ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ, ಹಾಗೂ ಪತ್ರಿಕಾ ರಂಗ, ಸಮಾಜ ಸೇವೆಯನ್ನು ಕಳೆದ ಐದು ವರ್ಷಗಳ ಕಾಲ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದರ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆಂಕಟಾಚಲ ಅವರು ಕಳೆದ ಐದು ವರ್ಷಗಳ ಕಾಲ ಮಾಡಿದ ಸೇವೆಗೆ ಪ್ರಶಸ್ತಿ ಬಂದಿದೆ. ಇನ್ನೂ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬರಲಿ, ಇನ್ನಷ್ಟು ಸಮಾಜ ಸೇವೆಯಲ್ಲಿ ಮುಂದುವರಿಯಲು ದೇವರು ಶಕ್ತಿ ನೀಡಲೆಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಬಳಗದವರು, ಪ್ರಾಧ್ಯಾಪಕ ವೃಂದದವರು, ಅಭಿಮಾನಿ, ಕುಟುಂಬ ವರ್ಗದವರು ಶುಭ ಹಾರೈಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version