ದಿನದ ಸುದ್ದಿ

ಮಹಾ ಮುಖಂಡ ಸಾಂಭಾಜಿ ಭಿಡೆ ನಿರ್ಬಂಧ?

Published

on

ಸುದ್ದಿದಿನ ಡೆಸ್ಕ್
ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಮಹಾರಾಷ್ಟ್ರದ ಮುಖಂಡ ಸಂಭಾಜಿರಾವ್ ಬಿಡೆಗೆ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಆದೇಶಿಸಿದ್ದಾರೆ. ಜುಲೈ 21ರ ಮಧ್ಯರಾತ್ರಿ 12ರಿಂದ 11 ದಿನಗಳ ಕಾಲ ಬೆಳಗಾವಿ ಜಿಲ್ಲೆ ಪ್ರವೇಶ ಮಾಡದಂತೆ ಮಹಾ ಮುಖಂಡ ಸಂಭಾಜಿರಾವ್ ಮೇಲೆ ನಿರ್ಬಂಧ ಹೇರಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಶಿವ ಪ್ರತಿಷ್ಠಾನ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿದ್ದರು. ಈ ವೇಳೆ ಅವರು ದಿ ಹಿಸ್ಟರಿ ಆಫ್ ರಾಯಘಡ ಸುವರ್ಣ ಸಿಂಹಾಸನ ವಿಷಯ ಕುರಿತು ಭಾಷಣ ಮಾಡಲಿದ್ದರು. ಪ್ರಚೋದನಕಾರಿ ಭಾಷಣದಿಂದ ಸಮಾಜದ ಶಾಂತಿ ಕಡದಬಾರದು ಮತ್ತು ಯಾವುದೇ ಜನಾಂಗದ ಭಾವನೆಗೆ ಧಕ್ಕೆ ಆಗಬಾರದೆಂಬ ಮುಂಜಾಗ್ರತಾ ಕಾರಣಕ್ಕೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬೀಮಾಕೋರೆಗಾಂವ ಗಲಭೆಗೆ ಬಿಡೆ ಪ್ರಚೋದನಕಾರಿ ಭಾಷಣವೇ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಹೇಳಿಕೆ ಅವಕಾಶ ನೀಡಬಾರದೆಂದು ನಿರ್ಬಂಧ ವಿಧಿಸಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Trending

Exit mobile version