ದಿನದ ಸುದ್ದಿ

ಸರ್ಕಾರಕ್ಕೆ ಟೋಪಿ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು : ಆರ್. ಟಿ.ಐ ಕಾರ್ಯಕರ್ತ ಭೀಮಪ್ಪ ಮಹತ್ವ ದಾಖಲೆ ಬಿಡುಗಡೆ

Published

on

ಸುದ್ದಿದಿನ, ಡೆಸ್ಕ್ : ಬೆಳಗಾವಿಯಲ್ಲಿ ಆರ್.ಟಿ.ಐ. ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸರ್ಕಾರಕ್ಕೆ ಟೋಪಿ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ದಾಖಲೆಗಳ ಪಟ್ಟಿ ಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ನಿರಾಶ್ರಿತರಿಗೆ ಕಾಯ್ದಿರಿಸಿದ್ದ ಜಮೀನು ಕಬಳಿಕೆ ಹಾಗೂ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಕಬಳಿಕೆ ಮಾಡಿದ್ದಾರೆ. ಮಾಹಿತಿ ಕೇಳಿದ್ರೆ ಹಿಡಕಲ್ ಡ್ಯಾಂ ಅಧಿಕಾರಿಗಳು ದಾಖಲೆಗಳನ್ನು ಗೆದ್ದಲು ಹುಳುಗಳು ನಾಶಪಡಿಸಿವೆ ಎಂದು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು, ಭೂಗಳ್ಳರು ಸೇರಿ 51 ಎಕರೆ 04 ಗುಂಟೆ ಜಮೀನು ಕಬಳಿಕೆ ಬಹಿರಂಗ ಮಾಡಿದ್ದಾರೆ. ಹಿಡಕಲ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಗ್ರಾಮಗಳ ಜನರಗಾಗಿ ಕಾಯ್ದಿರಿಸಲಾಗಿತ್ತು.ಈ ಸಂಬಂಧ 2018ರಲ್ಲಿ ಹುಕ್ಕೇರಿ ತಹಸೀಲ್ದಾರ ಡಿಸಿಗೆ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ 5 ಜನ ಗ್ರಾಮ ಲೆಕ್ಕಾಧಿಕಾರಿಗಳು ಭಾಗಿ ಆಗಿರುವುದನ್ನ ತಿಳಿಸಿದ್ದಾರೆ. ವರದಿ ಕೊಟ್ಟು 7 ತಿಂಗಳಾದ್ರು ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿಲ್ಲ. ತಕ್ಷಣವೇ ಭೂ ಕಬಳಿಕೆದಾರರನ್ನ ಬಂಧಿಸಬೇಕು. ಸರ್ಕಾರಿ ಜಮೀನು ಮರಳಿ ಪಡೆಯಬೇಕೆಂದು ಗಡಾದ ಆಗ್ರಹಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version