ದಿನದ ಸುದ್ದಿ
ಅಕ್ಕಿ ರಫ್ತು ವಹಿವಾಟು 6 ಸಾವಿರದ 115 ದಶಲಕ್ಷ ಡಾಲರ್ಗೆ ಏರಿಕೆ : ಸಚಿವ ಪಿಯೂಷ್ ಗೋಯಲ್
ಸುದ್ದಿದಿನ ಡೆಸ್ಕ್ : ದೇಶದ ಬಾಸ್ಮತಿಯೇತರ ಅಕ್ಕಿ ರಫ್ತು ವಹಿವಾಟಿನಲ್ಲಿ ಶೇಕಡ 109ರಷ್ಟು ಪ್ರಗತಿ ದಾಖಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಸೂಕ್ತ ನೀತಿಗಳಿಂದಾಗಿ ನಮ್ಮ ರೈತರು ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶ ಪಡೆಯುವಂತಾಗಿದೆ. ಜೊತೆಗೆ ಆಹಾರ ಭದ್ರತೆ ಖಾತ್ರಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಾಣಿಜ್ಯ ಗುಪ್ತಚರ ಮತ್ತು ಸಂಖ್ಯಾಶಾಸ್ತ್ರ ಮಹಾನಿರ್ದೇಶನಾಲಯದ ದತ್ತಾಂಶದ ಪ್ರಕಾರ, 2021-22ರ ಸಾಲಿನಲ್ಲಿ 6 ಸಾವಿರದ 115ದಶಲಕ್ಷ ಡಾಲರ್ ಮೊತ್ತದ ಬಾಸ್ಮತಿಯೇತರ ಅಕ್ಕಿ ರಫ್ತು ಮಾಡಲಾಗಿದೆ. 2013-14ನೇ ಸಾಲಿನಲ್ಲಿ 2 ಸಾವಿರದ 925ದಶಲಕ್ಷ ಡಾಲರ್ ಮೊತ್ತದ ಅಕ್ಕಿ ರಫ್ತು ಮಾಡಲಾಗಿದೆ. ಭಾರತವು 115 ಕ್ಕಿಂತ ಹೆಚ್ಚಿನ ರಾಷ್ಟ್ರಗಳಿಗೆ ಅಕ್ಕಿ ರಫ್ತು ಮಾಡುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243