ಸಿನಿ ಸುದ್ದಿ
ರೆಟ್ರೊ ಲುಕ್‍ನಲ್ಲಿ ಕಾಣಿಸಿದ ರಿಷಬ್ ಶೆಟ್ಟಿ
ಸುದ್ದಿದಿನ ಡೆಸ್ಕ್: ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರ ಬೆಲ್ ಬಾಟಮ್ ಚಿತ್ರದ ಪೋಸ್ಟರ್ ಭಾರಿ ಕುತೂಹಲ ಹುಟ್ಟಿಸಿತ್ತು. ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ರಿಶಬ್ ಅವರು ರೆಟ್ರೊ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೈಸೂರು ವಿವಿ ಕ್ಯಾಂಪಸ್‍ನಲ್ಲಿ ಕಪ್ಪು ಬಣ್ಣದ ಬೆಲ್ ಬಾಟಮ್ ಪ್ಯಾಂಟ್ ಹಾಗೂ ಅರಿಶಿಣ ಬಣ್ಣದ ಶರ್ಟ್ ತೊಟ್ಟಿದ್ದ ಶೆಟ್ಟಿ ಅವರು ಜಾವಾ ಬೈಕ್ ಪಕ್ಕದಲ್ಲಿ ನಿಂತು ಫೋಟೊಗೆ ಫೋಸ್ ಕೊಡುತ್ತಿದ್ದ ದೃಶ್ಯ ಎಲ್ಲರನ್ನೂ ಸೆಳೆಯಿತು.
ಈ ಸಿನಿಮಾದಲ್ಲಿ ಹರಿಪ್ರಿಯಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೊಡು ಸಿನಿಮಾದ ಹಾಡಿನಿಂದ ಈಚೆಗೆ ಸುದ್ದಿಮಾಡಿದ್ದ ರಿಷಬ್ ಅವರು ಬೆಲ್ ಬಾಟಮ್ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.