ಸಿನಿ ಸುದ್ದಿ
‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಸಿನೆಮಾ ಆಡಿಯೊ ಲಾಂಚ್ ಮಾಡಲಿದ್ದಾರೆ ಕಿಚ್ಚ..!
ಸುದ್ದಿದಿನ ಡೆಸ್ಕ್ | ಕಳೆದ ಹಲವು ದಿನಗಳಿಂದ ಅಭಿನಯ ಚಕ್ರವರ್ತಿ ಸುದೀಪ್ ಅವರ ಜತೆ ನಿರ್ದೇಶಕ ರಿಶಬ್ ಶೆಟ್ಟಿ ಕಾಣಿಸಿಕೊಂಡಿದ್ದ ಫೋಟೊಗಳು ಫೇಸ್‌ಬುಕ್ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿತ್ತು. ಅದರ ಹಿಂದಿನ ಮರ್ಮ ಈಗ ಗೊತ್ತಾಗಿದೆ. ನಿರ್ದೇಶಕ/ನಟ ರಿಶಬ್ ಶೆಟ್ಟಿ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮಾಡುತ್ತಿರುವ ವಿಷಯ ಗೊತ್ತೇ ಇದೆ.
ಈ ಸಿನಿಮಾದ ಆಡಿಯೊ ಲಾಂಚ್ ಶನಿವಾರ ನೆರವೇರಲಿದೆ. ಕಿಚ್ಚ ಸುದೀಪ್ ಅವರು ಆಡಿಯೊ ಬಿಡುಗಡೆ ಮಾಡಲಿದ್ದಾರೆ. ಈ ವಿಷಯವನ್ನು ರಿಶಬ್ ಶೆಟ್ಟಿ ಅವರೇ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಈ ಸಿನಿಮಾದ ದಡ್ಡ … ದಡ್ಡ… ಹಾಡು ಯೂಟ್ಯೂಬ್‌ನಲ್ಲಿ ವೈರಲ್ ಆಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401