ಕ್ರೀಡೆ
ಟೀಂ ಇಂಡಿಯಾದ ಈ ಯುವ ಆಟಗಾರನ ವಿಶೇಷ ದಾಖಲೆಗಳೇನು ಗೊತ್ತಾ ?
ಸುದ್ದಿದಿನ ಡೆಸ್ಕ್: ಭಾರತ ಕ್ರಿಕೆಟ್ ತಂಡ ಸೇರಿರುವ ರಿಷಬ್ ಪಂತ್ ವಿಶೇಷ ದಾಖಲೆಗಳನ್ನು ಬರೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡದ ಪರ ಆಡಲಿರುವ ರಿಷಬ್ ಪಂತ್ ಹಲವು ವಿಶೇಷ ದಾಖಲೆಗಳಿಗೆ ಕಾರಣವಾಗಿದ್ದಾರೆ.
17 ವರ್ಷದಲ್ಲಿ ಪಾದಾರ್ಪಣೆ ಮಾಡಿದ್ದ ಪಾರ್ಥಿವ್ ಪಟೇಲ್ ಅತ್ಯಂತ ಯುವ ವಿಕೆಟ್ ಕೀಪರ್ ಆಗಿದ್ದಾರೆ. ಅದರಂತೆ ಭಾರತ ತಂಡದ 36ನೇ ವಿಕೆಟ್ ಕೀಪರ್ ಆಗಿ ಆಡುತ್ತಿರುವ 20 ವರ್ಷದ ಎಡಗೈ ಬ್ಯಾಟ್ಸ್ ಮ್ಯಾನ್ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಟೀಮ್ ಇಂಡಿಯಾದ ಎರಡನೇ ಎಡಗೈ ಹಾಗೂ ಐದನೇ ಯುವ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.