ದಿನದ ಸುದ್ದಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ; ಆರೋಪಿತರ ಬಂಧನ
ಸುದ್ದಿದಿನಡೆಸ್ಕ್: ಹಣ ಕೊಡುವಂತೆ ಹೆದರಿಸಿ ವ್ಯಕ್ತಿಯೊಬ್ಬರಿಂದ ಮೊಬೈಲ್ ಕಸಿದು ಪರಾರಿಯಾಗಿದ್ದ ದರೋಡೆ ಕೋರರನ್ನು ನಗರದ ವಿದ್ಯಾನಗರ ಪೋಲೀಸರು ಬಂಧಿಸಿದ್ದಾರೆ.
ತುಮಕೂರಿನ ಬಿಪಿನ್ ಕುಮಾರ್ ಎಂಬಾತ ಇದೇ 5 ನೇ ತಾರೀಖಿನಂದು ದಾವಣಗೆರೆಯ ರೈಸ್‌ಮಿಲ್‌ನಲ್ಲಿ ಕೆಲಸ ಹುಡುಕಿಕೊಂಡು ಬಂದಿದ್ದು, ಬೆಳಗ್ಗೆ ಸುಮಾರು ಹತ್ತು ಗಂಟೆಯಲ್ಲಿ ಹೈವೆನಲ್ಲಿದ್ದ ಪೆಟ್ಟಿ ಅಂಗಡಿಯಲ್ಲಿ ಟೀ ಕುಡಿದು ಅಂಡರ್ ಬ್ರಿಡ್ಜ್ ಕೆಳಗೆ ಹೋಗುತ್ತಿರುವಾಗ ಯಾರೋ ಇಬ್ಬರು ತನ್ನನ್ನು ವಿಚಾರಿಸಿ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಚಾನೆಲ್ ಹತ್ತಿರ ಕರೆದುಕೊಂಡು ಹೋಗಿ ತನ್ನನ್ನು ಹಣಕೊಡುವಂತೆ ಹೆದರಿಸಿ ತನ್ನ ಬಳಿ ಇದ್ದ ಇಪ್ಪತ್ತು ಸಾವಿರ ಮೌಲ್ಯದ ಸ್ಯಾಮ್‌ಸಂಗ್ ಎ15 ಮೊಬೈಲ್ ಫೋನ್‌ನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಪ್ರಕರಣರಕ್ಕೆ ಸಂಬಂಧಿಸಿದಂತೆ ಆರೋಪಿತರನ್ನು ಪತ್ತೆ ಮಾಡಲು ಶ್ರೀ ವಿಜಯಕುಮಾರ್.ಎಂ. ಸಂತೋಷ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು. ಶ್ರೀ ಮಂಜುನಾಥ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಶ್ರೀ.ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಮತಿ ಪ್ರಭಾವತಿ.ಸಿ.ಶೇತಸನದಿ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಯಿತು.
ತಂಡವು ಆರೋಪಿತರಾದ ಎಂ: ಬೀರೇಶ – ಬೀರ, 26 ವರ್ಷ, ತರಗಾರ ಕೆಲಸ, ವಾಸ 3ನೇ ಕ್ರಾಸ್, ಅಶೋಕ ನಗರ, ದಾವಣಗೆರೆ ಎ2: ವಿನಾಯಕ – ವಿನ್ನಿ. -ಗಿರಿ, 24 ವರ್ಷ, ತರಗಾರ ಕೆಲಸ, 2ನೇ ಮೇನ್, 3ನೇ ಕ್ರಾಸ್, ಅಶೋಕ ನಗರ, ದಾವಣಗೆರೆ ಎ3: ಅರುಣ್ , 23 ವರ್ಷ, ಎಲೆಕ್ನಿಷಿಯನ್, ವಾಸ 3ನೇ ಮೇನ್, 1ನೇ ಕಾಸ್, ವಿನೋಬನಗರ, ದಾವಣಗೆರೆ, ಎ4: ಕಾರ್ತಿಕ್ , 19 ವರ್ಷ, ಎಲೆಕ್ನಿಷಿಯನ್, ವಾಸ 3ನೇ ಮೇನ್, 8ನೇ ಕ್ರಾಸ್, ವಿನೋನಗರ, ದಾವಣಗೆರೆ ಎ5: ತರುಣ್, 20 ವರ್ಷ, ವಾಟರ್ ವಾಶ್ ಕೆಲಸ, ವಾಸ 3ನೇ ಮೇನ್, 14ನೇ ಕ್ರಾಸ್, ವಿನೋಬನಗರ, ದಾವಣಗೆರೆ, ಎ6: ಮದನ್, 21 ವರ್ಷ, ಗೋಲ್ಡ್ ಕೆಲಸ, ವಾಸ 3ನೇ ಮೇನ್, 8ನೇ ಕ್ರಾಸ್, ವಿನೋಬನಗರ, ದಾವಣಗೆರೆ ರವರುಗಳನ್ನು ವಶಕ್ಕೆ ಪಡೆದು ದರೋಡೆ ಮಾಡಿದ್ದ 1) 20,000/- ರೂ ಬೆಲೆ ಬಾಳುವ ಸ್ಯಾಮ್‌ಸಂಗ್ ಎ15 ಮೊಬೈಲ್, ದರೋಡೆಗೆ ಬಳಸಿದ್ದ 1) KA-17 HH-5172 ನೇ ನಂಬರ್ ಹೋಂಡಾ ಶೈನ್ ಬೈಕ್ ಅಂದಾಜು ಬೆಲೆ ರೂ 50000/- & 2) KA-17 HM-2020 ಅಂದಾಜು ಬೆಲೆ 60000/- ಪಡಿಸಿಕೊಂಡಿರುತ್ತೆ.
ಪ್ರಕರಣದಲ್ಲಿ ಆರೋಪಿತರನ್ನು ಪತ್ತೆಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳಾದ ಶ್ರೀಮತಿ ಪ್ರಭಾವತಿ.ಸಿ.ಶೇತಸನದಿ ಪೊಲೀಸ್ ಇನ್ಸ್‌ಪೆಕ್ಟರ್ ವಿದ್ಯಾನಗರ ಠಾಣೆ, ಶ್ರೀ ವಿಶ್ವನಾಥ ಜಿ.ಎನ್ ಪಿಎಸ್‌ಐ, ಶ್ರೀ ಎಂ.ಎಸ್ ಹೊಸಮನಿ ಪಿ.ಎಸ್.ಐ ವಿದ್ಯಾನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಆನಂದ.ಎಂ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಯೋಗೀಶ್ ನಾಯ್ಕ, ಗೋಪಿನಾಥ.ಬಿ.ನಾಯ್ಕ, ಲಕ್ಷ್ಮಣ್.ಆರ್. ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ, ಶಾಂತರಾಜ್ ಮತ್ತು ಕಮಾಂಡ್ ಸೆಂಟರ್ ಸಿಬ್ಬಂದಿ ಮಾರುತಿ, ಸೋಮಶೇಖರ್ ರವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243