ದಿನದ ಸುದ್ದಿ
ಇಟಲಿಯಲ್ಲಿ ಸಿಕ್ತು ಚಿನ್ನದ ಪುರಾತನ ನಾಣ್ಯಗಳು
ಸುದ್ದಿದಿನ ಡೆಸ್ಕ್: ಉತ್ತರ ಇಟಲಿಯ ಹಳೆಯ ರಂಗಮಂದಿರದಲ್ಲಿ ರೋಮನ್ ಯುಗದ ನೂರಾರು ಚಿನ್ನದ ನಾಣ್ಯಗಳನ್ನು ಪತ್ತೆಯಾಗಿವೆ. 5ನೇ ಶತಮಾನದ ರೋಮನ್ ಸಾಮ್ರಾಜ್ಯಕ್ಕೆ ಸೇರಿವೆ ಎನ್ನಲಾದ ನೂರಾರು ಬಂಗಾರದ ನಾಣ್ಯಗಳು ಕೊಮೊ ನಗರದ ಕ್ರೆಸೋನಿ ರಂಗಮಂದಿರ ನೆಲಮಾಳಿಗೆಯಲ್ಲಿ ಪತ್ತೆಯಾಗಿವೆ ಎಂದು ಇಟಲಿಯ ಸಂಸ್ಕೃತಿ ಸಚಿವಾಲಯ ಘೋಷಿಸಿದೆ.
ಸಂಸ್ಕೃತಿಯ ಸಚಿವ ಅಲ್ಬರ್ಟೊ ಬೋನಿಸ್ಯೋಲಿ ನಾಣ್ಯಗಳ ಶೋಧಕಾರ್ಯವನ್ನು “ನನಗೆ ಹೆಮ್ಮೆಯಿಂದ ತುಂಬುವ ಸಂಶೋಧನೆಯಾಗಿದೆ. ಈ ಪ್ರದೇಶವು ನಮ್ಮ ಪುರಾತತ್ವ ಶಾಸ್ತ್ರಕ್ಕೆ ನಿಜವಾದ ನಿಧಿಯಾಗಿದೆ ಎಂದು ಅವರು ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
1870ರಲ್ಲಿ ಪ್ರಾರಂಭವಾದ ರಂಗಮಂದಿರವನ್ನು 1997ರಲ್ಲಿ ಮುಚ್ಚಲಾಗಿತ್ತು. ಆದರೆ, ಈ ಜಾಗದಲ್ಲಿ ಈಗ ಮತ್ತಷ್ಟು ಉತ್ಖನನ ನಡೆಸಲು ಅನುಮತಿ ನೀಡುವುದನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.