ಲೈಫ್ ಸ್ಟೈಲ್

ಪ್ಲಾಸ್ಟಿಕ್ ಫ್ಯಾಷನ್ ಲೋಕದಲ್ಲೊಂದು‌ ಸುತ್ತು..!

Published

on

ಟ್ರೆಂಡ್ ಸೃಷ್ಟಿಸಿದೆ ಪ್ಲಾಸ್ಟಿಕ್ ಕೋಟ್ ಮತ್ತು ಪ್ಲಾಸ್ಟಿಕ್ ಬೂಟ್ !

ಫ್ಯಾಷನ್ ಲೋಕದಲ್ಲಿ ದಿನಕ್ಕೊಂದು ಪ್ರಯೋಗ ನಡೆಯುತ್ತಲೆ ಇರುತ್ತದೆ. ದಿನಕ್ಕೊಂದು ಹೊಸಾ ಫ್ಯಾಷನ್ ಟ್ರೆಂಡ್ ಆಗುತ್ತದೆ. ಆದರೇ ಈ ಬಾರಿಯ ಸ್ಟೋರೇಜ್ ತುಂಬಾ ಡಿಡಿಫರೆಂಟ್. 2018ರ ನ್ಯೂಯಾರ್ಕ್ ಫ್ಯಾಷನ್ ಟೈಮ್ಸ್ ಮುತ್ತು ಪಾರಿಸ್ ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಎಲ್ಲರೂ ಹುಬ್ಬೇರಿಸುವಂತಿತ್ತು “ಪ್ಲಾಸ್ಟಿಕ್ ಫ್ಯಾಷನ್ ಟ್ರೆಂಡ್ ” … ಏನೂ! ಪ್ಲಾಸ್ಟಿಕ್ ಫ್ಯಾಷನ್ ಎನ್ನುತ್ತೀರಾ, ಹೌದು ; ನೈಲಾನ್, ಸಿಲ್ಕ್, ಕಾಟನ್,ಲೆಧರ್ ಎಲ್ಲಾ ಮುಗಿದು, ಈಗ ಪ್ಲಾಸ್ಟಿಕ್ ಫ್ಯಾಷನ್ ನ ಕಾಲ!

“FASHION IN PLASTIC IS FANTASTIC” ಅನ್ನುತ್ತಿದ್ದಾರೆ ಫ್ಯಾಷನ್ ಮಾಂತ್ರಿಕರು. ಬಹಳ ಫಂಕೀ ಹಾಗೂ ವಿಭಿನ್ನ ಎನಿಸಿಕೊಂಡರೂ ಫ್ಯಾಷನ್ ಪ್ರಿಯರು ಮನ ಗೆದ್ದಿದೆ ಈ ಫ್ಯಾಷನ್.

2018 ರ ಹಿಟ್ ಟ್ರೆಂಡ್ ಆಗಿದೆ ಪ್ಲಾಸ್ಟಿಕ್ ಉಡುಪುಗಳು. ಉದ್ದನೆಯ ಪ್ಲಾಸ್ಟಿಕ್ ಹೂಡೆಡ್ ಕೋಟ್, ಪ್ಲಾಸ್ಟಿಕ್ ಪ್ಲೀಟಡ್ ಸ್ಕರ್ಟ್, ರಫಲ್ಸ್ ನ ಪ್ಲಾಸ್ಟಿಕ್ ಫ್ರಾಕ್ , ಮಂಡಿ ಎತ್ತರದ ಪ್ಲಾಸ್ಟಿಕ್ ಬೂಟ್, ಪ್ಲಾಸ್ಟಿಕ್ ಜಾಕೆಟ್, ಇವೆಲ್ಲವೂ ಫ್ಯಾಷನ್ ದುನಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದೆ.

ಫ್ಯಾಷನ್ ಪ್ರಿಯರಂತೂ ಈ ಮಾನ್ಸೂನ್ ಸೀಸನ್ ಡಿಸೈನರ್ ಪ್ಲಾಸ್ಟಿಕ್ ಟ್ರೆಂಡ್ ಗಳನ್ನ ಫಾಲೋ ಮಾಡುತ್ತಾ ಸೆಲ್ಫಿ ಕ್ಲಿಕ್ಕಿಸುವುದರಲ್ಲಿ  ಬಿಗಿ ಆಗಿದ್ದಾರೆ. ಟ್ರಾಂಸ್ಲೂಸೆಂಟ್ ಪ್ಲಾಸ್ಟಿಕ್ ಕೋಟ್, ಜಾಕೆಟ್, ಕ್ಯಾಪ್, ಬೂಟ್, ಬ್ಯಾಗ್ಗಗಳು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ.

ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿರುವ ಈ ಪ್ಲಾಸ್ಟಿಕ್ ಫ್ಯಾಷನ್ ಭಾರತಕ್ಕೂ ಕಾಲಿಟ್ಟಿದೆ. ಮುಂಗಾರು ಮಳೆಯಲ್ಲಿ ಈ ರೀತಿಯ ಪ್ಲಾಸ್ಟಿಕ್ ಫ್ಯಾಷನ್ ಸೂಪರ್ ಅನ್ನುತ್ತಿದ್ದಾರೆ  ಫ್ಯಾಷನ್ ಪ್ರಿಯರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version