ದಿನದ ಸುದ್ದಿ
ಚನ್ನಗಿರಿ | ರೋವರ್ಸ್ ಅಂಡ್ ರೇಂಜರ್ಸ್ ; ಬೇಸಿಗೆ ಶಿಬಿರದ ಉದ್ಘಾಟನೆ
ಸುದ್ದಿದಿನ, ಚನ್ನಗಿರಿ : ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್ ಅಂಡ್ ರೇಂಜರ್ಸ್ ಘಟಕಗಳ ಅಡಿಯಲ್ಲಿ ಬೇಸಿಗೆ ಶಿಬಿರ ದ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.
ಶಿಬಿರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿಜಿ ಅಮೃತೇಶ್ವರ ವಹಿಸಿದ್ದರು. ಜಿಲ್ಲಾ ಆಯುಕ್ತರಾದ ಶ್ರೀಮತಿ ಶಾರದಾ ಮಾಗನಹಳ್ಳಿ ಉದ್ಘಾಟಿಸಿದರು.
ರೋವರ್ ಘಟಕದ ಸಂಚಾಲಕರಾದ ಡಾ. ಸಿ ಎಮ್ ಪ್ರಕಾಶ ರೆಂಜರ್ಸ್ ಸಂಚಾಲಕರಾದ ಡಾ. ಶಕುಂತಲಾ, ಶ್ರೀಮತಿ ಸುಪ್ರಿಯ ಹಾಗೂ ಶ್ರೀಮತಿ ಗೌರಮ್ಮ ಹಿರಿಯ ಪ್ರಾಧ್ಯಾಪಕರಾದ ಡಾ ಮಹಮದ್ ಖಾನ್ ಹಾಗೂ ಶ್ರೀ ಲಕ್ಷ್ಮಣ್ ಇವರುಗಳ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243