ದಿನದ ಸುದ್ದಿ
ರೌಡಿಶೀಟರ್ ಕಣುಮಾ ಭೀಕರ ಕೊಲೆ ; ಎಸ್ಪಿ ಉಮಾಪ್ರಶಾಂತ್ ಹೇಳಿದ್ದೇನು..?
ಸುದ್ದಿದಿನ,ದಾವಣಗೆರೆ: ರೌಡಿಶೀಟರ್ ಸಂತೋಷ್ ಅಲಿಯಾಸ್ ಕಣುಮಾನನ್ನು ಇಂದು ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ಕಲ್ಲೇಶ್ವರ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದ ಜಿಮ್ ಮತ್ತು ಕ್ಲಬ್ ಹತ್ತಿರ ರೌಡಿಶೀಟರ್ ಕುಣುಮಾ ಕೊಲೆಯಾಗಿದ್ದಾನೆ. ಜಿಮ್ ಹತ್ತಿರ ಊಟ ಮುಗಿಸಿಕೊಂಡು ಬಂದಿದ್ದ ಕಣುಮಾನನ್ನು ಹೊಂಚು ಹಾಕಿ ಒಮ್ಮಿಂದೊಮ್ಮೆಲೆ ದಾಳಿ ನಡೆಸಿ ಆಗಂತುಕರು ಕೊಂದು ಹಾಕಿದ್ದಾರೆ. ಕುಣುಮಾನ ಮೇಲೆ ರೌಡಿಶೀಟರ್, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ರಿಮಿನಲ್ ಅಪರಾಧಗಳು ಇದ್ದವು.2019 ರಲ್ಲಿ ಕೊಲೆಯಾದ ರೌಡಿ ಶೀಟರ್ ಬುಳ್ ನಾಗನ ಹತ್ಯೆಯಲ್ಲಿ ಕಣುಮಾನ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.
ನಿಧಿಯಲ್ಲಿ ಸಿಕ್ಕ ಬಂಗಾರವನ್ನು ಕೆಲವರಿಗೆ ನೀಡುವುದಾಗಿ ಅವರಿಂದ ಹಣಪೀಕಿ ವಂಚನೆ ಮಾಡಿದ ಆರೋಪವೂ ಕಣುಮಾ ಮೇಲಿತ್ತು. ರೌಡಿ ಕಾಗೆ ರಾಜಾ ಮತ್ತು ಚಟ್ನಿ ಅಜ್ಜಯ ಜೋಡಿ ಕೊಲೆಗೆ ಪ್ರತಿಯಾಗಿ ಬುಳ್ ನಾಗನನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಕಣುಮಾ ಅರೆಸ್ಟ್ ಆಗಿದ್ದ.
ಎಸ್ಪಿ ಉಮಾಪ್ರಶಾಂತ್ ಪ್ರತಿಕ್ರಿಯೆ
“ಇಂದು ಸಂಜೆ ಸುಮಾರು 5:30 ರ ಹೊತ್ತಿಗೆ ಕಾದು ಕುಳಿತಿದ್ದ ಏಳು ಜನ ದುಷ್ಕರ್ಮಿಗಳು ರೌಡಿಶೀಟರ್ ಕುಣುಮಾನನ್ನು ಕೊಲೆಮಾಡಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತಂಡ ರೂಪಿಸಿದ್ದು, ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.”
ಸುದ್ದಿದಿನ.ಕಾಂ|ವಾಟ್ಸಾಪ್|9980346243