ದಿನದ ಸುದ್ದಿ
ರೌಡಿ ಶೀಟರ್ ಮಹಮ್ಮದ್ ಇಸಾಕ್ ನಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಸುದ್ದಿದಿನ ಡೆಸ್ಕ್ | ರೌಡಿಶೀಟರ್ ಮಹಮ್ಮದ್ ಇಸಾಕ್, ಮೊಹಮ್ಮದ್ ಫೈಜುಲ್ಲಾ ಹಲ್ಲೆಗೋಳಗಾದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಕೊಟ್ಟ ಹಣವನ್ನ ವಾಪಸ್ಸು ಕೇಳಿದಕ್ಕೆ ಫೈಜುಲ್ಲಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು,ಈತ ಕೆಜಿ ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ರೌಡಿಶೀಟರ್ ಆಗಿದ್ದಾನೆ.ಕಳೆದ ಎರಡು ದಿನಗಳ ಹಿಂದೆ ನಡೆದಿರೋ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಣ ಕೋಡುತ್ತೆನೆಂದು ಕರೆಸಿ ಫೈಜುಲ್ಲಾ ಮೇಲೆ ಮಾರಕಾಸ್ರಗಳಿಂದ ಹಲ್ಲೆಗೈದ ರೌಡಿಶೀಟರ್ ಮೊಹಮ್ಮದ್, ಹೆಚ್ ಬಿ ಆರ್ ಲೇಔಟ್ ನ ಫಸ್ಟ್ ಡ್ರೈವ್ ಸೆಕೆಂಡ್ ಶೋರೂಂನಲ್ಲಿ ಘಟನೆ ನಡೆದಿದೆ. ಹಲ್ಲೆಗೈದು ಪರಾರಿಯಾಗಿರೋ ರೌಡಿಶೀಟರ್ ಮೊಹಮ್ಮದ್ ಇಸಾಕ್ ಮೇಲೆ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.