ರಾಜಕೀಯ
ಠೇವಣಿ ಕಳೆದುಕೊಂಡ ಹುಚ್ಚಾ ವೆಂಕಟ್, ಮುನಿರತ್ನಗೆ ಭರ್ಜರಿ ಗೆಲುವು
ಸುದ್ದಿದಿನ ಡೆಸ್ಕ್: ರಾಜರಾಜೇಶ್ವರಿ ನಗರ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಚ್ಚಾ ವೆಂಕಟ್ ಠೇವಣಿ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಚುನಾವಣೆಗೂ ಮುನ್ನ ಕೆಲ ಮಾಧ್ಯಮಗಳಿಗೆ ಕುತೂಹಲ ಕೆರಳಿಸಿದ್ದ ಅಭ್ಯರ್ಥಿ ಹುಚ್ಚಾ ವೆಂಕಟ್ ಕೇವಲ 604 ಮತ ಪಡೆದಿದ್ದಾರೆ. ನಾನು ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ. ಮತದಾರರೇ ನನ್ನ ಅರ್ಥ ಮಾಡಿಕೊಂಡು ಮತ ಹಾಕಬೇಕು ಎಂದು ಹೇಳುತ್ತಿದ್ದ ಹುಚ್ಚಾ ವೆಂಕಟ್‌ಗೆ ಕಡಿಮೆ ಮತಗಳು ಬಿದ್ದಿದ್ದು, ಭಾರಿ ಮುಖ ಭಾಗವಾಗಿದೆ.
ಗುರುವಾರ ರಾಜರಾಜೇಶ್ವರಿ ನಗರ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. 14ನೇ ಸುತ್ತಿನ ಎಣಿಕೆ ವೇಳೆ ನಟ, ನಿರ್ದೇಶಕ ಹುಚ್ಚ ವೆಂಕಟ್ 562ಕ್ಕೂ ಅಧಿಕ ಮತ ಪಡೆದಿದ್ದಾರೆ. ಕ್ಷೇತ್ರದಲ್ಲಿ 900ಕ್ಕೂ ಹೆಚ್ಚು ನೋಟಾ ಮತಗಳು ಚಲಾವಣೆಯಾಗಿವೆ.
ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು, ಬಿಜೆಪಿಯ ತುಳಸಿ ಮುನಿರಾಜು ಗೌಡ ವಿರುದ್ಧ ಭಾರೀ ಮುನ್ನಡೆ ಪಡೆದುಕೊಂಡಿದ್ದು, ಗೆಲುವು ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು
ಮುನಿರತ್ನ 1,03,195
ಮುನಿರಾಜು ಗೌಡ 69,769
ಜಿಎಚ್ ರಾಮಚಂದ್ರ 54,289