ದಿನದ ಸುದ್ದಿ

ದೇಶದ ಪ್ರಮುಖ ಸುದ್ದಿ ಸಂಸ್ಥೆಗಳಿಗೆ 1.1ಕೋಟಿ ರೂ ದಂಡ

Published

on

ಸುದ್ದಿದಿನ ಡೆಸ್ಕ್ : ಕತುವಾ ಅತ್ಯಾಚಾರ ಪ್ರಕರಣ ಪ್ರಸಾರ ಸಂಬಂಧ ಪ್ರಮುಖ ಸುದ್ದಿ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ 1.1ರೂ ದಂಡ ವಿಧಿಸಿದೆ. ಜನವರಿಯಲ್ಲಿ ನಡೆದಿದ್ದ ಅಪ್ರಾಪ್ತೆಯ ಅತ್ಯಾಚಾರದ ಸುದ್ದಿಯನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿದ್ದರಿಂದ ದಂಡ ಹಾಕಿದೆ.

ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿಗಳಾದ ಗೀತಾ ಮಿತ್ತಲ್ ಒಳಗೊಂಡ ಪೀಠವು ಹನ್ನೆರಡು ಸುದ್ದಿಗಳಿಗೆ ತಲಾ 10 ಲಕ್ಷ ರೂ. ದಂಡ ವಿಧಿಸಿದೆ. ದ ಟೈಮ್ಸ್ ಆಫ್ ಇಂಡಿಯಾ, ಹಿಂದುಸ್ತಾನ್ ಟೈಮ್ಸ್, ದ ಇಂಡಿಯನ್ ಎಕ್ಸ್‌ಪ್ರೆಸ್‌, ದ ಹಿಂದು, ಎನ್.ಡಿಟಿವಿ, ಪಿಯೊನಿಯರ್, ರಿಪಬ್ಲಿಕ್ ಟಿವಿ, ಡೆಕ್ಕನ್ ಕ್ರಾನಿಕಲ್, ದ ವೀಕ್, ದ ಸ್ಟೇಟ್ಸ್ ಮನ್, ಇಂಡಿಯಾ ಟಿವಿ ಮತ್ತು ಫಸ್ಟ್ ಪೋಸ್ಟ್ ಸುದ್ದಿ ಸಂಸ್ಥೆ ಗಳಿಗೆ ತಲಾ 10 ಲಕ್ಷ ರೂ. ದಂಡ ವಿಧಿಸಿದೆ.

ಫೇಸ್ ಬುಕ್ ಇಂಡಿಯಾ, ಗೂಗಲ್, ಯೂಟ್ಯೂಬ್ ದಂಡ ವಿಧಿಸಿದೆ. ವಿದೇಶಿ ಮಾಧ್ಯಮಗಳಾದ ಅಲ್ ಜಜೀರಾ, ಬಜ್.ಫೀಡ್ ಸಂಸ್ಥೆಗಳಿಗೂ ಕೋರ್ಟ್ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.

ಡೆಕ್ಕನ್ ಕ್ರಾನಿಕಲ್ ಸಂಸ್ಥೆಯು ಹಣಕಾಸಿನ ಸಮಸ್ಯೆ ನಡುವೆಯೂ ದಂಡ ಭರಿಸಿದೆ. ಎಲ್ಲಾ ಸುದ್ದಿಸಂಸ್ಥೆಗಳು ಕ್ಷಮೆ ಯಾಚಿಸಿದ್ದು, ಕೋರ್ಟ್ ಗೆ ಪಾವತಿಯಾದ ದಂಡ ಹಣವನ್ನು ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ದ ಪ್ರಿಂಟ್ ವರದಿ ಮಾಡಿದೆ.

ನ್ಯಾಯಮೂರ್ತಿ ಮಿತ್ತಲ್ ಅವರು ಮೊದಲು 25ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಿದ್ದರು. ಆದರೆ, ಕೆಲವು ಮಾಧ್ಯಮಗಳ ವಕೀಲರು, ಮಾಧ್ಯಮಗಳು ಭಾರಿ ಮೊತ್ತದ ದಂಡ ಪಾವತಿಸಲು ಹೊರೆಯಾಗುತ್ತದೆ ಎಂದು ಮನವಿ ಮಾಡಿದ್ದರಿಂದ ದಂಡದ ಹಣವನ್ನು ಕಡಿಮೆ ಮಾಡಿದ್ದಾರೆ.

ಅತ್ಯಾಚಾರ ಪ್ಕರಣದ ಸುದ್ದಿ ಪ್ರಸಾರದ ಬಗ್ಗೆ ನಿಗಾ ಇಡಲು ಕೋರ್ಟ್ ಹಿರಿಯ ವಕೀಲ ಅರವಿಂದ ನಿಗಂ ಅವರನ್ನು ನೇಮಕ ಮಾಡಿತ್ತು. ಮೊದಲು ದಂಡ ಪಾವತಿಸಿ ನಂತರ ಕೋರ್ಟ್ ಮುಂದೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version