ದಿನದ ಸುದ್ದಿ

ಪಿಎಂ ಕಿಸಾನ್ ಸಂಪದ ಯೋಜನೆಯಡಿ 20 ಸಾವಿರ ಕೋಟಿ ರೂಪಾಯಿ ವೆಚ್ಚ : ಸಚಿವ ಡಾ. ಎಲ್. ಮುರುಗನ್

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ತೂತುಕುಡಿ : ತಮಿಳುನಾಡಿಗೆ ವಿಶೇಷ ಆರ್ಥಿಕ ವಲಯ ಸ್ಥಾನಮಾನ ನೀಡುವ ಜೊತೆಗೆ ಕಡಲಕಳೆ ಪಾರ್ಕ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಮಾಚಾರ ಮತ್ತು ಪ್ರಸಾರ, ಮೀನುಗಾರಿಕೆ, ಪಶುಸಂಗೋಪನಾ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಹೇಳಿದ್ದಾರೆ.

ತೂತುಕುಡಿ ಜಿಲ್ಲೆಯ ತಿರುಚಂದೂರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಇಡೀ ದೇಶದಲ್ಲಿ ಮೊದಲ ಹಾಗೂ ವಿನೂತನ ಕಾರ್ಯಕ್ರಮವಾಗಿದೆ. ಪಿಎಂ ಕಿಸಾನ್ ಸಂಪದ ಯೋಜನೆ ವ್ಯಾಪ್ತಿಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಯೋಜನಾ ಸ್ಥಳವನ್ನು ಗುರುತಿಸಿ ಭೂಸ್ವಾಧೀನ ಪಡಿಸಿಕೊಂಡ ನಂತರ ಕಾಮಗಾರಿ ಆರಂಭವಾಗಲಿದೆ. ಪಿಎಂ ಕಿಸಾನ್ ಸಂಪದ ಯೋಜನೆಯಡಿ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲು ಸಜ್ಜಾಗಿದೆ ಎಂದು ಡಾ. ಎಲ್. ಮುರುಗನ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version