ದಿನದ ಸುದ್ದಿ
ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ ದೇವನೂರರ “ಆರ್‌ಎಸ್ಎಸ್ ಆಳ ಮತ್ತು ಅಗಲ” ಪುಸ್ತಕ.!
ಸುದ್ದಿದಿನ,ಬೆಂಗಳೂರು: ಹಿರಿಯ ಸಾಹಿತಿ, ಚಿಂತಕ ದೇವನೂರು ಮಹಾದೇವ ಅವರು ಬರೆದ ‘ಆರ್‌ಎಸ್ಎಸ್ ಆಳ ಮತ್ತು ಅಗಲ’ ಪುಸ್ತಕ(ಕೃತಿ) ಭಾರೀ ಪ್ರಮಾಣದಲ್ಲಿ ಮುದ್ರಣಗೊಂಡು ದಾಖಲೆ ಮಟ್ಟದಲ್ಲಿ ಮಾರಾಟ ಕಾಣುತ್ತಿದೆ.
ಈ ಪುಸ್ತಕ ರಾಜ್ಯದೆಲ್ಲೆಡೆ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪುಸ್ತಕವನ್ನು ಅನ್ಯಭಾಷೆ ತಮಿಳು, ತೆಲುಗು ಸೇರಿದಂತೆ ಇನ್ನೀತರ ಭಾಷೆಗಳಲ್ಲಿ ಮುದ್ರಿಸಲು ಹಲವು ಪ್ರಕಾಶಕರು ಮುಂದೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಈ ಪುಸ್ತಕ ಬಿಡುಗಡೆಗೊಂಡು 3 ದಿನಗಳಲ್ಲಿ 9 ಸಾವಿರ ಪುಸ್ತಕ ಮಾರಾಟ ಆಗಿದ್ದಾವೆ. ಜುಲೈ ಅಂತ್ಯದ ವೇಳೆಗೆ ಓದುಗರ ಕೈಗೆ ಒಟ್ಟು 50 ಸಾವಿರ ಪುಸ್ತಕ ಸೇರಲಿವೆ ಎಂದು ಅಂದಾಜಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243