ರಾಜಕೀಯ

ಯಡಿಯೂರಪ್ಪ ಮೇಲೆ RSS ಉಪಾಸ್ತ್ರ ಪ್ರಯೋಗ

Published

on

ಸುದ್ದಿದಿನ, ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಯಡಿಯೂರಪ್ಪ ಮೇಲೆ ಆರ್ ಎಸ್ ಎಸ್ ಉಪಾಸ್ತ್ರ  ಪ್ರಯೋಗ ಮಾಡಿದೆ.

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಬಳಿಕ ನಡೆದ ಎರಡೂ ಉಪಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಹೊಣೆಯನ್ನ ಯಡಿಯೂರಪ್ಪ ಅವರಿಗೆ ಆರ್ ಎಸ್ ಎಸ್ ನ ಪ್ರಮುಖರು ಹೊರೆಸಿದ್ದಾರೆ.ಕಳೆದ ಮೂರು ದಿನಗಳ ಹಿಂದೆ ಆರ್ ಎಸ್ ಎಸ್ ಕಚೇರಿ ಕೇಶವಕೃಪಾದಲ್ಲಿ ನಡೆದಿದ್ದ ಸುದೀರ್ಘ ಸಭೆಯಲ್ಲಿ, ಬಿಜೆಪಿ ಆಂತರಿಕ ಸಂವಿಧಾನದಂತೆ ಒಂದೆ ಹುದ್ದೆ ನಿಭಾಯಿಸಲು ಬಿ ಎಸ್ ವೈಗೆ ಆರ್ ಎಸ್ ಎಸ್ ಪ್ರಮುಖರು ಸಲಹೆ‌‌ ನೀಡಿದ್ದಾರೆ.

ಆದರೆ ಲೋಕಸಭಾ ಚುನಾವಣೆ ನೆಪ ಹೇಳಿದ ಯಡಿಯೂರಪ್ಪ ಅವರಿಗೆ, ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಬೆಂಬಲ ಅಗತ್ಯ, ಒಕ್ಕಲಿಗ ಸಮುದಾಯಕ್ಕೆ ಪ್ರಬಲ ಹುದ್ದೆ ಕೊಡುವಂತೆ  ಸಲಹೆ ಕೊಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version