ದಿನದ ಸುದ್ದಿ
ಕೊಡಗಿನಲ್ಲಿ ಭೀಮ ಪುತ್ರಿಯರ ಮೇಲೆ ಆರೆಸ್ಸೆಸ್ ಕಾರ್ಯಕರ್ತರ ಹಲ್ಲೆ
ಸುದ್ದಿದಿನ ಡೆಸ್ಕ್; ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಮೆಡಿಕೇರಿಗೆ ತೆರಳಿದ್ದ ಭೀಮ್ ಪುತ್ರಿ ಬ್ರಿಗೇಡ್ ನ ಮಹಿಳಾ ಕಾರ್ಯಕರ್ತೆಯರ ಮೇಲೆ ಆರೆಸ್ಸೆಸ್ ಕಾರ್ಯಕರ್ತರು ಎನ್ನಲಾದ ಹತ್ತಾರು ಹುಡುಗರು ಹಲ್ಲೆ ನಡೆಸಿ, ಅಂಬೇಡ್ಕರ್ ಬಣೊರ್ಡ್ ಗೆ ಒದ್ದು ಅಪಮಾನ ಮಾಡಿದ್ದಾರೆ.
ಈ ಸಂಬಂಧ ಮಡಿಕೇರಿ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಬ್ರಿಗೇಡ್ ನ ರೇವತಿ ರಾಜ್ ಅವರು ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಇದು ವೈರಲ್ ಆಗಿದೆ.
ಈ ಕುರಿತು ಸುದ್ದಿದಿನ ಪ್ರತಿನಿಧಿ ಜತೆ ಮಾತನಾಡಿದ ರೇವತಿ ಅವರು, ರಾಜರಾಜೇಶ್ವರಿ ನಗರದ ಬಳಿ ಮಹಿಳೆಯರನ್ನು ನಿರಾಶ್ರಿತರ ಕೇಂದ್ರಕ್ಕೆ ರವಾನಿಸಲು ತೆರಳಿದ್ದ ತಂಡದವರ ಕಾರು ಮತ್ತೊಂದು ಕಾರಿಗೆ ಟಚ್ ಮಾಡಿದ ವಿಷಯ ಇಟ್ಟುಕೊಂಡು ಸ್ಥಳಕ್ಕೆ ಬಂದ ಯುವಕರು ನನ್ನ ಮೇಲೆ ಹಾಗೂ ತಂಡದ ಸದಸ್ಯೆಯರ ಮೇಲೆ ಹಲ್ಲೆ ನಡೆಸಿದರು. ಭೀಮ್ ಪುತ್ರಿಯರ ಬ್ರಿಗೇಡ್ ಎಂಬ ಬೋರ್ಡ್ ನೋಡಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಂಬೇಡ್ಕರ್ ಬೋರ್ಡ್ ಗೆ ಒದ್ದು ಅಪಮಾನಗೊಳಿಸಿದರು ಎಂದು ಹೇಳಿದ್ದಾರೆ.
ಘಟನೆಯನ್ನು ಚಿತ್ರೀರಿಸುತ್ತಿದ್ದ ಸದಸ್ಯೆಯರಿಂದ ಫೋನ್ ಕಸಿದು ಒಡೆದುಹಾಕಿದ್ದಾರೆ ಎಂದೂ ದೂರಿದ್ದಾರೆ.