ದಿನದ ಸುದ್ದಿ
ಆರ್‌ಟಿಇ ಆನ್ ಲೈನ್ ಅರ್ಜಿ ಆಹ್ವಾನ : ಏ.15 ಕೊನೆಯ ದಿನ
ಸುದ್ದಿದಿನ ,ಧಾರವಾಡ : 2019-20 ನೇ ಸಾಲಿನ ಮಕ್ಕಳ ಉಚಿತ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ(ಆರ್.ಟಿ.ಇ)-2009ಮತ್ತು2012 ರಡಿ ಧಾರವಾಡ ಜಿಲ್ಲೆಯ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಗಳಲ್ಲಿ 718 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕಾಗಿ ಸರ್ಕಾರದ ಮಾರ್ಗಸೂಚಿ ಅನ್ವಯ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
www.schooleducation.kar.nic.in ವೆಬ್‌ಸೈಟ್ ವಿಳಾಸದ ಮೂಲಕ ಅರ್ಜಿ ಸಲ್ಲಿಸಬಹುದು. ಪಾಲಕರು ಏಪ್ರಿಲ್ 15. 2019 ರ ವರೆಗೆ ಅರ್ಜಿ ಸಲ್ಲಿಸಬಹುದು.
ತಾಲೂಕುವಾರು ಆರ್.ಟಿ.ಇ. ಸೀಟುಗಳು ಲಭ್ಯವಿರುವ ವಿವರ ಹೀಗಿದೆ
ಧಾರವಾಡ ಗ್ರಾಮೀಣ-45, ಧಾರವಾಡ ಶಹರ-166 ಹುಬ್ಬಳ್ಳಿ ಗ್ರಾಮೀಣ-31, ಹುಬ್ಬಳ್ಳಿ ಶಹರ- 400ಕುಂದಗೋಳ-49, ನವಲಗುಂದ-37 ಸೀಟುಗಳು ಹಂಚಿಕೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401