ಸಿನಿ ಸುದ್ದಿ
ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ
ಸುದ್ದಿದಿನ ಡೆಸ್ಕ್| ಹೊಸ ತನವನ್ನು ಹುಟ್ಟುಹಾಕಿರುವ ಉದಯಾ ಟೀವಿಯಲ್ಲಿ ಪ್ರಸಾರವಾಗುತ್ತಿರುವ ಸದಾ ನಿಮ್ಮೊಂದಿಗೆ ಕಾರ‌್ಯಕ್ರಮದಲ್ಲಿ ಈವಾರ ನಟಿ ರಶ್ಮಿಕಾ ಮಂದಣ್ಣ ಅವರು ಪಾಲ್ಗೊಂಡಿದ್ದಾರೆ. ಇದೇ ಭಾನುವಾರ ರಾತ್ರಿ 9ಗಂಟೆಗೆ ಕಾರ‌್ಯಕ್ರಮ ಪ್ರಸಾರವಾಗಲಿದೆ.
ರಶ್ಮಿಕಾ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪಲ್ಲವಿಯವರಿಗೆ ತಮ್ಮ ಕೈಲಾದ ಸಹಾಯ ಮಾಡೋದಕ್ಕೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದ್ದಾರೆ. ಇವರನ್ನು ಕಾರ್ಯಕ್ರಮದ ಉದ್ದೇಶ ತಿಳಿಸಿ ಕರೆದ ತಕ್ಷಣ ಮನಸ್ಪೂರ್ತಿಯಾಗಿ ಬಂದು ಭಾಗವಹಿಸಿದರು. ಲಕ್ಷ್ಮೀ ಅಮ್ಮ ಯಾವ ರೀತಿ ಸಹಾಯ ಮಾಡಬಹುದು ಇವರಿಗೆ ಅಂತ ಕೇಳಿದಾಗ ರಶ್ಮಿಕಾ ಅವರು ಪಲ್ಲವಿಯ ತಂದೆ ಯಾವ ಕೆಲಸ ಮಾಡುತ್ತಿದ್ದರು ಅಂತ ಕೇಳಿ ತಿಳ್ಕೊಂಡು ತಾವು ಅದೇ ಕೆಲಸ ಮಾಡುವುದಾಗಿ ಹೇಳಿದ್ರು.
ಇವರು ರಾಜಾಜಿನಗರದಲ್ಲಿರುವ ಪೆಟ್ರೊಲ್ ಬಂಕ್ ಒಂದಕ್ಕೆ ಭೇಟಿ ಕೊಟ್ಟು ಆ ಪೆಟ್ರೋಲ್ ಬಂಕ್ ಮಾಲೀಕರ ಹತ್ತಿರ ಹೋಗಿ ನಾನು ನಿಮ್ಮ ಪೆಟ್ರೋಲ್ ಬಂಕ್ ಅಲ್ಲಿ ಒಂದು ದಿನ ಕೆಲಸ ಮಾಡುತ್ತೇನೆ. ಒಂದು ದಿನದ
ಸಂಬಳವನ್ನ ನನಗೆ ಕೊಡಿ. ಅದರಿಂದ ಪಲ್ಲವಿಗೆ ಸಹಾಯವಾಗುತ್ತದೆ ಎಂದು ಹೇಳಿ ಕೆಲಸ ಮಾಡಲು ಶುರು ಮಾಡಿದರು. ಇವರು ಮೊದಲನೇ ಸಲ ಪೆಟ್ರೋಲ್ ಹಾಕ್ತೀದ್ರೂ ಕೂಡ ಯಾವುದೇ ಗಡಿಬಿಡಿ ಇಲ್ಲದೇ
ತುಂಬ ಲವಲವಿಕೆ ಇಂದ ಕೆಲಸ ಮಾಡಿದ್ರು.. ಅಲ್ಲಿಗೆ ಪೆಟ್ರೋಲ್ ಹಾಕಿಸಲು ಬಂದ ಅಭಿಮಾನಿಗಳ ಕೋರಿಕೆಯನ್ನ ಈಡೇರಿಸಿದರು.
ಪಲ್ಲವಿಗೋಸ್ಕರ ಆ ಒಂದು ದಿನ ಪೆಟ್ರೋಲ್ ಬಂಕ್ ಅಲ್ಲಿ ಕೆಲಸ ಮಾಡಿ
ದುಡಿದ ಹಣವನ್ನು ಪಲ್ಲವಿ ಕುಟುಂಬಕ್ಕೆ ನೀಡಿ ಸಹಾಯ ಮಾಡಿದ್ದಾರೆ. ಪಲ್ಲವಿಯವರಿಗೆ ಎಷ್ಟು ದುಡ್ಡಿನ ಅವಶ್ಯಕತೆ ಇತ್ತು ರಶ್ಮಿಕಾ ಅವರು ಎಷ್ಟು ಸಂಪಾದನೆ ಮಾಡಿಕೊಟ್ಟ್ರು ಅನ್ನೊದನ್ನ ಎಪಿಸೋಡ್ ಪ್ರಸಾರವಾದಾಗಲೇ ನೋಡಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9986715401