ದಿನದ ಸುದ್ದಿ

ಎಸ್.ಆರ್.ಶೀತಲ್‌ಗೆ ಮೂರು ಚಿನ್ನದ ಪದಕಗಳು

Published

on

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಕನ್ವೆಷನ್ ಸೆಂಟರ್‌ನಲ್ಲಿ ಮೇ 15ರಂದು ನಡೆದ 59ನೇ ಘಟಿಕೋತ್ಸವದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಎಸ್.ಬಿ.ರುದ್ರಕುಮಾರ್ ಇವರ ಪುತ್ರಿಯಾದ ಎಸ್.ಆರ್. ಶೀತಲ್ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

2023-24ನೇ ಸಾಲಿನಲ್ಲಿ 10,000 ಅಂಕಗಳಿಗೆ ಸರಾಸರಿ 9.104 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಯಾಂಕಿತರಾಗಿರುವ ಎಸ್.ಆರ್. ಶೀತಲ್ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ ಚಿನ್ನದ ಪದಕ ಹಾಗೂ ಡಾ.ಆರ್.ರಾಮಯ್ಯ ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version