ದಿನದ ಸುದ್ದಿ
ಸಾಮಾಜಿಕ ಸಾಮರಸ್ಯದಿಂದ ಸಮಾಜದ ಪ್ರಗತಿ : ಎಸ್.ಕೆ.ಬಿ.ಪ್ರಸಾದ್
ಸುದ್ದಿದಿನ,ಚಿತ್ರದುರ್ಗ: ಸಾಮಾಜಿಕ ಸಾಮರಸ್ಯದಿಂದ ಸಮಾಜದ ಪ್ರಗತಿ ( Social Development ) ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ( DIET principal – S.K.B. Prasad ) ಹೇಳಿದರು.
ನಗರದ ಡಯಟ್‌ನಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಸಾಂಸ್ಕೃತಿಕ ಪ್ರಧಾನವಾದ ರಾಷ್ಟçವಾಗಿದೆ. ವಿವಿಧ ಪ್ರಾಂತ್ಯ, ಭಾಷೆ, ಆಚರಣೆಯಲ್ಲಿ ಹಾಗೂ ಪ್ರಾದೇಶಿಕವಾಗಿ ಭಿನ್ನತೆ ಹೊಂದಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ರೂಢಿಸಿಕೊಂಡಿರುವ ರಾಷ್ಟ್ರವಾಗಿದೆ. ನಮ್ಮ ಆಚರಣೆ, ಭಾಷೆಯಲ್ಲಿ ಭಿನ್ನತೆಯಿದ್ದರೂ ನಮ್ಮ ಭಾವನೆಗಳ ಐಕ್ಯತೆಯಿಂದ ಸಾಮರಸ್ಯದ ಜೀವನ ನಡೆಸಲು ಸಾಧ್ಯವಾಗುತ್ತದೆ. ಶಾಲಾ ಕಾಲೇಜು, ಕಚೇರಿಗಳಲ್ಲಿ ಕೌಟುಂಬಿಕ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು. ಇದರಿಂದ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತವೆ ಎಂದು ತಿಳಿಸಿದರು. ಸಮಾಜದಲ್ಲಿ ನೆಲೆಸಿರುವ ನಾವು ನಾವೆಲ್ಲರೂ ಒಂದೇ ಎಂಬ ಏಕತೆ ರೂಢಿಸಿಕೊಳ್ಳುವುದರ ಮೂಲಕ ಮಾನವೀಯ ಸಂವೇದನೆ ಬೆಳೆಸಿಕೊಳ್ಳಬೇಕು ಎಂದರು.
ಇದನ್ನೂ ಓದಿ |ಆ. 26 ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ; ಬಿಜೆಪಿ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ : ಸಿದ್ದರಾಮಯ್ಯ
ಉಪನ್ಯಾಸಕ ಎಸ್.ಬಸವರಾಜು ರಾಷ್ಟ್ರೀಯ ಸದ್ಭಾವನೆ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದರು.
ಹಿರಿಯ ಉಪನ್ಯಾಸಕರಾದ ಈ.ಹಾಲಮೂರ್ತಿ, ಉಪನ್ಯಾಸಕರಾದ ಆರ್.ನಾಗರಾಜು, ಎನ್.ರಾಘವೇಂದ್ರ, ಕೆ.ಎಂ.ನಾಗರಾಜು, ಸಾಂಖಿಕ ಅಧಿಕಾರಿ ರೂಪಾ, ತಾಂತ್ರಿಕ ಸಹಾಯಕರಾದ ಕೆ.ಅರ್.ಲೋಕೇಶ್, ಅರ್.ಲಿಂಗರಾಜು, ದ್ವಿತೀಯ ದರ್ಜೆ ಸಹಾಯಕರಾದ ಸೌಭಾಗ್ಯಮ್ಮ. ನಿರ್ಮಲಾ, ವನಜಾಕ್ಷಮ್ಮ, ಪ್ರಶಿಕ್ಷಣಾರ್ಥಿಗಳಾದ ರೋಜಾ, ರೂಪಾ, ಸುಚಿತ್ರ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243