ದಿನದ ಸುದ್ದಿ

ದಾವಣಗೆರೆ | ಫೆ. 24ರಂದು ಸಾಹಿತ್ಯ – ಸಾಂಸ್ಕೃತಿಕ ಸಮ್ಮಿಲನ

Published

on

ಸುದ್ದಿದಿನ,ದಾವಣಗೆರೆ : ತಿಂಗಳ ಅಂಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ಲೇಖಕಿ ಶ್ರೀಮತಿ ಉಮಾದೇವಿ ಹಿರೇಮಠ ಅವರ ಆತಿಥ್ಯದಲ್ಲಿ ದಾವಣಗೆರೆ ವಿನೋಬ ನಗರ 2 ನೇ ಮೇನ್ 6 ನೇ ಕ್ರಾಸ್ ನಲ್ಲಿರುವ ಅವರ ನಿವಾಸದಲ್ಲಿ ಫೆ. 24 ರ ಬುಧವಾರ ಸಂಜೆ 5 ಗಂಟೆಗೆ ಕವಿ ಡಾ. ಆನಂದ್ ಋಗ್ವೇದಿ ಹಾಗೂ ಕವಯಿತ್ರಿ ಶ್ರೀಮತಿ ಉಮಾದೇವಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ, ಚುಟುಕು ವಾಚನ ಹಾಗೂ ಸಾಂಸ್ಕೃತಿಕ ಸಮ್ಮಿಲನ ಆಯೋಜಿಸಲಾಗಿದೆ.

ಲೇಖಕ ಮಹಾಂತೇಶ್ ಬಿ ನಿಟ್ಟೂರ್ ಅವರು ಶ್ರೀಮತಿ ಉಮಾದೇವಿ ಹಿರೇಮಠ ಅವರ ” ಕಾಡಬೇಡ ನನ್ನ “ ಕವನ ಸಂಕಲನದ ಒಂದು ಕವನ ಹಾಗೂ ಡಾ. ಆನಂದ್ ಋಗ್ವೇದಿಯವರ ” ಕರಕೀಯ ಕುಡಿ ” ಕಥಾ ಸಂಕಲನದ ಒಂದು ಕಥೆಯ ಭಾವಾವಲೋಕನ ಮಾಡಲಿದ್ದಾರೆ.

ಇದನ್ನೂ ಓದಿ |ಸಂವಿಧಾನದ ತಿದ್ದುಪಡಿ ಅನಿವಾರ್ಯ’ ಹೇಳಿಕೆ ; ಕ್ಷಮೆಯಾಚಿಸಿದ ಸಾಹಿತಿ ದೊಡ್ಡರಂಗೇಗೌಡ

ಸಮಾಜ ಸೇವಕಿ ಶ್ರೀಮತಿ ಮಹಾದೇವಮ್ಮ ಹಾಗೂ ಶಿಕ್ಷಣ ಇಲಾಖೆಯ ಎ. ಜಿ. ಸೈಫುಲ್ಲಾ ಅವರಿಂದ ಗೀತ ಗಾಯನ, ಗಂಗಾಧರ ಬಿ ಎಲ್ ನಿಟ್ಟೂರ್ ಅವರಿಂದ ಜಾನಪದ ನೃತ್ಯ , ಆಹ್ವಾನಿತ ಕವಿ ಮಿತ್ರರಾದ ಶಿವಯೋಗಿ ಹಿರೇಮಠ, ರಾಜಶೇಖರ್ ಗುಂಡಗಟ್ಟಿ, ರಾಜೇಂದ್ರಪ್ರಸಾದ್ ನೀಲಗುಂದ, ಗಂಗಾಧರ ಬಿ ಎಲ್ ನಿಟ್ಟೂರ್, ಪಾಪುಗುರು, ಸತೀಶ್, ತಾರೇಶ್ ಕೆ.ಪಿ ಅಣಬೇರು, ವೀರೇಶ್ ಬಿ. ಜಿ. ಎಂ, ಮಲ್ಲಮ್ಮ ನಾಗರಾಜ್, ಸಂಧ್ಯಾ ಸುರೇಶ್, ಸುಭಾಷಿಣಿ ಮಂಜುನಾಥ್, ಮಂಜುಳಾ ಹಿರೇಮಠ, ಸತ್ಯಭಾಮ ಮಂಜುನಾಥ್, ಅನ್ನಪೂರ್ಣ ಪಾಟೀಲ್, ಶೈಲಜಾ ಪಾಟೀಲ್, ಸುನೀತ ಪ್ರಕಾಶ್, ಎ. ಬಿ ರುದ್ರಮ್ಮ ಅವರಿಂದ ಸ್ವರಚಿತ ಚುಟುಕು ವಾಚನ ನಡೆಯಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version