ದಿನದ ಸುದ್ದಿ
ನಾಳೆ ಸಾಹಿತ್ಯ – ಸಂವಾದ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟೆಬಲ್ ಟ್ರಸ್ಟ್ ದಾವಣಗೆರೆ ಹಾಗೂ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಾಳೆ (ಶನಿವಾರ) ದಾವಣಗೆರೆಯ ರೋಟರಿ ಬಾಲಭವನದಲ್ಲಿ ಸಂಜೆ 4.00 ಗಂಟೆಗೆ “ ಸಾಹಿತ್ಯ – ಸಂವಾದ “ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಮಹಾಂತೇಶ್.ಬಿ.ನಿಟ್ಟೂರು ಹಾಗೂ ಸಂಚಾಲಕರಾದ ಗಂಗಾಧರ ಬಿ ಎಲ್ ನಿಟ್ಟೂರ್ ತಿಳಿಸಿದ್ದಾರೆ.
ಕೃಷಿ ವಿಜ್ಞಾನಿ ಮತ್ತು ಖ್ಯಾತ ಸಾಹಿತಿಗಳಾದ ಬೆಂಗಳೂರು ಕೆ.ಎನ್. ಗಣೇಶಯ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ್, ಧಾರವಾಡ ಅವರು ಚಿಂತಕರಾಗಿ ಭಾಗವಹಿಸುವರು.
ಸಾಹಿತಿಗಳಾದ ಬಿ.ಎನ್. ಮಲ್ಲೇಶ್, ಶ್ರೀ ಬಾ.ಮ.ಬಸವರಾಜಯ್ಯ, ಡಾ. ದಾದಾಪೀರ್ ನವಿಲೇಹಾಳ್, ಓಂಕಾರಯ್ಯ ತವನಿಧಿ ಡಾ.ಆನಂದ್ ಋಗ್ವೇದಿ, ಶಿವಯೋಗಿ ಹಿರೇಮಠ್, ರಾಜಶೇಖರ ಗುಂಡಗತ್ತಿ, ಸುಬ್ರಹ್ಮಣ್ಯ ನಾಡಿಗೇರ್, ವೀರಭದ್ರಪ್ಪ ತೆಲಿಗಿ, ಪಾಪು ಗುರು ಸಂವಾದದಲ್ಲಿ ಪಾಲ್ಗೊಳ್ಳುವರು.
ಈ ಅರ್ಥಪೂರ್ಣ ಜ್ಞಾನ ಸಿಂಧುವಿನಲ್ಲಿ ಮಿಂದೇಳಲು ದಾವಣಗೆರೆ ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಹಾಂತೇಶ್ ಹಾಗೂ ಗಂಗಾಧರ್ ಕೋರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243