ದಿನದ ಸುದ್ದಿ

ವಾರದ ಹಿಂದೆ ಉದ್ಘಾಟನೆಗೊಂಡ ಕಾಂಕ್ರಿಟ್ ರಸ್ತೆ ಈಗ ತೊರೆ!

Published

on

ಸುದ್ದಿದಿನ ಡೆಸ್ಕ್: ಕೊಡಗಿಗೆ ಹೊಂದಿಕೊಂಡಂತೆ ಇರುವ ಸಕಲೇಶಪುರ ಗಡಿ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಅನಾಹುತಗಳು ಸಂಭವಿಸಿವೆ. ಹದಿನೈದು ದಿನಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ಬಿಸಿಲೆ ಕಾಂಕ್ರಿಟ್ ರಸ್ತೆ ಸಂಪೂರ್ಣ ನಾಶವಾಗಿ ಆ ಜಾಗದಲ್ಲಿ ತೊರೆಯೊಂದು ಹರಿಯುತ್ತಿದೆ.
ಪ್ರತ್ಯಕ್ಷವಾಗಿ ನೋಡಿದವರು ಇಲ್ಲೊಂದು ರಸ್ತೆ ಇತ್ತು ಎಂಬುದನ್ನೇ ನಂಬುತ್ತಿಲ್ಲ. ಕುಕ್ಕೇ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
ಅಡ್ಡಹೊಳೆ ಭಾಗದಲ್ಲಿ ಸಂಪೂರ್ಣ ಕೊಚ್ಚಿಹೋಗಿದ್ದು, ಕುಕ್ಕೆ ಸುಬ್ರಮಣ್ಯಕ್ಕೆ ಹೋಗಲು ರಸ್ತೆಯೇ ಇಲ್ಲದಂತಾಗಿದೆ.

Leave a Reply

Your email address will not be published. Required fields are marked *

Trending

Exit mobile version