ದಿನದ ಸುದ್ದಿ

‘ಸೂಳೆಕೆರೆ ಉಳಿಸಿ‌ ಅಭಿಯಾನ’ಕ್ಕೆ ಸ್ಯಾಂಡಲ್ ವುಡ್ ಬೆಂಬಲ..!

Published

on

ಭಾಗ-3 : ಸೂಳೆಕೆರೆ ಉಳಿಸಿ ಅಭಿಯಾನ

ಸ್ಯಾಂಡಲ್‌ವುಡ್ ನ ಬಾಸ್ ಶಿವಣ್ಣ ಸೇರಿದಂತೆ ಹಲವು‌ ನಟರು,ತಂತ್ರಜ್ಞರು ಸೂಳೆಕೆರೆ ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರರಂಗ ಇನ್ನು ಕಲವು ದಿನಗಳಲ್ಲಿ ಸೂಳೆಕೆರೆ ಉಳಿಸಿ ಅಭಿಯಾನದಲ್ಲಿ‌ ಭಾಗವಹಿಸಲು ಸೂಳೆಕೆರೆಗೆ ಆಗಮಿಸಲಿದ್ದಾರೆ.

ಸೂಳೆಕೆರೆ ಉಳಿಸಿ‌ ಅಭಿಯಾನ ಎಲ್ಲೆಲ್ಲಿ?

‘ಸೂಳೆಕೆರೆ ಉಳಿಸಿ‌ ಅಭಿಯಾನ’ವನ್ನು‌ ಆಟೋರ‍್ಯಾಲಿ ಮೂಲಕ ಜನರಲ್ಲಿ ಸೂಳೆಕೆರೆಯ ಪ್ರಸ್ತುತ ಸ್ಥಿತಿಯನ್ನು ತಿಳಿಸಿ‌ ಅವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಇತ್ತೀಚೆಗೆ ‘ಖಡ್ಗ ಸ್ವಯಂ ಸೇವಕರ ಸಂಘ ಕರ್ನಾಟಕ’ವು

 

ಚನ್ನಗಿರಿ, ಅಜ್ಜಿಹಳ್ಳಿ,ಸುಣ್ಣಿಗೆರೆ, ಅರೆನಳ್ಳಿ, ಎರೆಹಳ್ಳಿ, ಗೋಪನಾಳ್, ಕೆ ಗಾಣದಕಟ್ಟೆ, ಸಾರಥಿ, ಹೊಸೂರು, ಮಾವಿನಕಟ್ಟೆ, ಮಾಡಾಳು,ಹಿರೇಮಳಲಿ, ಮೆಳನಾಯಕನಕಟ್ಟೆ ಹಾಗೂ ನಲ್ಲೂರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಅಭಿಯಾನಕ್ಕೆ ನೀವೂ ಕೈ ಜೋಡಿಸಿ

ಜಿಲ್ಲೆಯ ಹಾಗೂ ಚನ್ನಗಿರಿ ತಾಲ್ಲೂಕಿನ ಪ್ರತೀ ಹಳ್ಳಿಗಳಲ್ಲಿ ನಿಷ್ಠಾವಂತ, ಸ್ವಯಂಪ್ರೇರಿತ ಮತ್ತು ನಿರಪೇಕ್ಷಿತ ಸ್ವಯಂ ಸೇವಕರನ್ನು ಸೂಳೆಕೆರೆ ಉಳಿಸಿ ಅಭಿಯಾನಕ್ಕೆ ಹುಡುಕಾಟದಲ್ಲಿರುತ್ತದೆ ಖಡ್ಗ ಸಂಘ. ನೀವೂ ಈ ಅಭಿಯಾನದಲ್ಲಿ ಭಾಗವಹಿಸಿ ನಮ್ಮ ಸೂಳೆಕೆರೆ ಉಳಿವಿಗೆ ಪಾತ್ರಧಾರರಾಗಲು..

ಖಡ್ಗ ಸ್ವಯಂ ಸೇವಕರ ಸಂಘ(ರಿ)- ಕರ್ನಾಟಕ’ 

ರಘು.ಬಿ.ಆರ್ ಹೊನ್ನೆಮರದಳ್ಳಿ|9972414251

ಕೆ.ಸಿ.ಬಸವರಾಜ್ ಬೆಳ್ಳೂಡಿ| 9606781310

ಬಿ. ಕುಬೇಂದ್ರ ಚನ್ನಗಿರಿ | 9900437357 ಗೆ

ಇವರನ್ನು ಸಂಪರ್ಕಿಸುವುದರ ಮೂಲಕ ಹೋರಾಟದ ಬಗೆಗಿನ ಮಾಹಿತಿಯನ್ನು ಪಡೆಯಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version